ಉಪ್ಪಿನಂಗಡಿ: ಪವಿತ್ರ ಮೃತ್ತಿಕೆ ಸಂಗ್ರಹಣಾ ರಥಕ್ಕೆ ಸ್ವಾಗತ

0

ಉಪ್ಪಿನಂಗಡಿ: ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಹಾಗೂ ಥೀಮ್ ಪಾರ್ಕ್‌ಗೆ ನಾಡಿನಾದ್ಯಂತದಿಂದ ಪವಿತ್ರ ಸ್ಥಳಗಳಿಂದ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ರಥವು ಸಂಚರಿಸುತ್ತಿದ್ದು, ಸಂಗಮ ಕ್ಷೇತ್ರವಾದ ಉಪ್ಪಿನಂಗಡಿ ರಥವು ನ.4ರಂದು ಆಗಮಿಸಿತು.

ಗಾಂಧಿಪಾರ್ಕ್ ಬಳಿ ರಥವನ್ನು ಸ್ವಾಗತಿಸಲಾಯಿತು. ಬಳಿಕ ಉಪ್ಪಿನಂಗಡಿ ಬ್ಯಾಂಕ್ ರಸ್ತೆಯಾಗಿ ಮೆರವಣಿಗೆಯಲ್ಲಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಾನಕ್ಕೆ ಆಗಮಿಸಿದ ರಥಕ್ಕೆ ಪುಷ್ಪಾರ್ಚನೆ ಮಾಡಿ, ಬಜತ್ತೂರು, ಹೀರೆಬಂಡಾಡಿ, 34 ನೆಕ್ಕಿಲಾಡಿ ಹಾಗೂ ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಗಳ ಪವಿತ್ರ ಜಾಗಗಳಿಂದ ಸಂಗ್ರಹಿಸಿದ ಪವಿತ್ರ ಮೃತ್ತಿಕೆಯನ್ನು ನೀಡಲಾಯಿತು. ಅಲ್ಲಿ ರಥದಲ್ಲಿನ ಎಲ್‌ಇಡಿ ಪರದೆಯಲ್ಲಿ ಕೆಂಪೇಗೌಡರ ಸಾಧನೆ, ಜೀವನ ಚರಿತ್ರೆ ಹಾಗೂ ಧೀಮ್ ಪಾರ್ಕ್‌ನ ಚಿತ್ರಣಗಳನ್ನೊಳಗೊಂಡ ವಿಡಿಯೋವನ್ನು ತೋರಿಸಲಾಯಿತು.

ಈ ಸಂದರ್ಭ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಸದಸ್ಯರಾದ ಜಯಂತ ಪೊರೋಳಿ, ಹರಿರಾಮಚಂದ್ರ, ಹರಿಣಿ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ, ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿ, 34 ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷೆ ಸ್ವಪ್ನ, ಬಜತ್ತೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮ, ಉಪ್ಪಿನಂಗಡಿ ಹೋಬಳಿ ಕಂದಾಯಾಧಿಕಾರಿ ಚಂದಪ್ಪ ಗೌಡ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಸಂದೀಪ್, ಉಪ್ಪಿನಂಗಡಿ ಗ್ರಾಮಕರಣಿಕ ಜಯಪ್ರಕಾಶ್, 34ನೆಕ್ಕಿಲಾಡಿ ಗ್ರಾಮ ಕರಣಿಕೆ ನವೀತಾ ಡಿ., ಪ್ರಮುಖರಾದ ಸುರೇಶ್ ಅತ್ರೆಮಜಲು, ಸಂತೋಷ್ ಕುಮಾರ್ ಪಂರ್ದಾಜೆ, ಯು.ಟಿ. ತೌಸೀಫ್, ಲೊಕೇಶ್ ಬೆತ್ತೋಡಿ, ಅಬ್ದುಲ್ ರಶೀದ್, ಚಂದಪ್ಪ ಮೂಲ್ಯ, ಯು.ಜಿ.ರಾಧಾ, ಕೈಲಾರ್ ರಾಜಗೋಪಾಲ ಭಟ್, ವಿಶ್ವನಾಥ ಗೌಡ, ಮೀನಾಕ್ಷಿ, ವಿದ್ಯಾಲಿಂಗಪ್ಪ, ವಿಶ್ವನಾಥ ಶೆಟ್ಟಿ ಕಂಗ್ವೆ, ವಿದ್ಯಾಧರ ಜೈನ್, ಪುರುಷೋತ್ತಮ ಮುಂಗ್ಲಿಮನೆ, ಜಯಂತಿ ರಂಗಾಜೆ, ಶೋಭಾ ನಟ್ಟಿಬೈಲು, ಸದಾನಂದ ನೆಕ್ಕಿಲಾಡಿ ಹಾಗೂ ಪರಿಸರದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಬಜತ್ತೂರು, ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೇಬಂಡಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು , ಉಪಾಧ್ಯಕ್ಷರು ಮತ್ತು ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here