ನಾಡಿನ ಸೌಹಾರ್ಧ ಪರಂಪರೆಗೆ ಶಂಸುಲ್ ಉಲಮಾರ ಕೊಡುಗೆ ಅಪಾರ:ಉಸ್ಮಾನುಲ್ ಪೈಝಿ
ಕೆಮ್ಮಾರ : ದಕ್ಷಿಣ ಭಾರತದ ಬಲಿಷ್ಠ ಧಾರ್ಮಿಕ ಸಂಘಟನೆ “ಸಮಸ್ತ” ಉಲಮಾ ಒಕ್ಕೂಟ ಇದರ ಶಿಲ್ಪಿ ಶಂಸುಲ್ ಉಲಮಾ ಮತ್ತು ಅಗಲಿದ ಉಲಮಾ ಉಮರಾ ನಾಯಕರ ಅನುಸ್ಮರಣೆ, ಮೌಲಾನ ಅಜ್ಜಿಕಟ್ಟೆ ಆದಂ ದಾರಿಮಿ ಉಸ್ತಾದ್ ರಚಿಸಿದ ಶಂಸುಲ್ ಉಲಮಾ ಮೌಲಿದ್ ಗ್ರಂಥ ಬಿಡುಗಡೆ ಹಾಗೂ ಸಮಸ್ತದ ಕೇಂದ್ರೀಯ ಮುಶಾವರ ಸದಸ್ಯರಾಗಿ ಆಯ್ಕೆಗೊಂಡ ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜಿನ ಪ್ರಾನ್ಸುಪಾಲರಾದ ಶೈಖುನಾ ಉಸ್ಮಾನ್ ಪೈಝಿ ಉಸ್ತಾದರಿಗೆ ಸನ್ಮಾನ ಕಾರ್ಯಕ್ರಮ ಕೆಮ್ಮಾರ ಶಕ್ತಿನಗರದ ಶಂಸುಲ್ ಉಲಮಾ ಮೆಮೋರಿಯಲ್ ದಹವಾ ಶರೀಹತ್ ಕಾಲೇಜಿನಲ್ಲಿ ಜರಗಿತು. ಉಸ್ಮಾನ್ ಪೈಝಿ ಉಸ್ತಾದ್ ಮಾತನಾಡಿ ನಾಡಿನ ಸೌಹಾರ್ಧ ಪರಂಪರೆಗೆ ಶಂಸುಲ್ ಉಲಮಾ ನೀಡಿದ ಕೊಡುಗೆ ಅಪಾರ. ತೊಂಬತ್ತರ ದಶಕದಲ್ಲಿ ಇಡೀ ದೇಶದಲ್ಲಿ ಕೊಮುಗಲಭೆ ನಡೆಯುತ್ತಿರುವಾಗ ಕೇರಳದಲ್ಲಿ ಶಂಸುಲ್ ಉಲಮಾ ಮತ್ತು ಸಮಸ್ತದ ದೀರ್ಘ ದೃಷ್ಟಿಯಿಂದಾಗಿ ಒಂದೇ ಒಂದು ಗಲಬೆ ನಡೆದಿಲ್ಲ. ಅಂತಹ ಸಮಸ್ತದ ಸದಸ್ಯರಾಗುತ್ತೇನೆಂದು ಕನಸು ಮನಸ್ಸಲ್ಲೂ ಊಹಿಸಿರಲಿಲ್ಲ ಎಂದು ಹೇಳಿದರು. ಸಂಸ್ಥೆಯ ಅಧ್ಯಕ್ಷ
ಎಸ್‌ಬಿ ದಾರಿಮಿ ಅಧ್ಯಕ್ಷತೆ ವಹಿಸಿದರು.
ಅಜ್ಜಕಟ್ಟೆ ಉಸ್ತಾದ್ ಉದ್ಘಾಟಿಸಿದರು. ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಸಮಿತಿ ಅಧ್ಯಕ್ಷ ಎಲ್‌ಟಿ ರಝಾಕ್ ಹಾಜಿ ಪುತ್ತೂರು, ಉದ್ಯಮಿಗಳಾದ ಉಮರ್ ಹಾಜಿ ಕೋಡಿಂಬಾಡಿ, ಬಶೀರ್ ಹಾಜಿ ದಾರಂದಕುಕ್ಕು, ಬದ್ರುದ್ದೀನ್ ಹೇಂತಾರ್, ‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ರಹ್ಮತುಲ್ಲಾ ಹಾಜಿ ಪಾಟ್ರಕೋಡಿ, ಹಸೈನಾರ್ ಹಾಜಿ ಕೊಯಿಲ, ಎನ್. ಇಸಾಕ್ ಕೆಮ್ಮಾರ, ಹನೀಪ್ ದಾರಿಮಿ ಸವಣೂರು, ಎನ್ ಇಸ್ಮಾಯಿಲ್ ಕೆಮ್ಮಾರ, ಹನೀಪ್ ದಾರಿಮಿ ನೆಕ್ಕಿಲಾಡಿ, ಅಬ್ದುಲ್ ರಝಾಕ್ ದಾರಿಮಿ ಮೇನಾಲ, ಬಾ ಅಸನಿ ಕೆಮ್ಮಾರ ಮೊದಲಾದವರು ಉಪಸ್ಥಿತರಿದ್ದರು. ಮ್ಯಾನೇಜರ್ ಕೆಎಂಎ ಕೊಡುಂಗಾಯಿ ಸ್ವಾಗತಿಸಿದರು.
ಯೂನಿಕ್ ಅಬ್ದುಲ್ ರಹ್ಮಾನ್ ವಂದಿಸಿದರು.