ರಾಮಕುಂಜ: ಕಾರುಗಳ ನಡುವೆ ಡಿಕ್ಕಿ ಸಂಭವಿಸಿ ಜಖಂಗೊಂಡಿರುವ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ರಾಮಕುಂಜ ಗ್ರಾಮದ ಆತೂರಿನಲ್ಲಿ ಅ.18ರಂದು ರಾತ್ರಿ ನಡೆದಿದೆ.
ಮಂಗಳೂರು ನಿವಾಸಿ ರಮೇಶ್ ಎಂಬವರು ಮಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆಂದು ಕಾರಿನಲ್ಲಿ(ಕೆಎ 19, ಎಂಎನ್ 0985) ಹೋಗುತ್ತಿದ್ದವರು ರಾಮಕುಂಜ ಗ್ರಾಮದ ಆತೂರಿಗೆ ತಲುಪುತ್ತಿದ್ದಂತೆ ಹಿಂಬದಿಯಿಂದ ಬಂದ ಅಲ್ಟೋ ಕಾರು(ಕೆಎ 41 ಎಂ 2919) ಡಿಕ್ಕಿಯಾಗಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ. ಮಂಗಳೂರು ನಿವಾಸಿ ರಮೇಶ್ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.