




ಪುತ್ತೂರು: ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರುರವರು ನಗರ ಪ್ರದೇಶದಲ್ಲಿ ಅನಾಥವಾಗಿರುವ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವ ಸೇವೆಗೆ ಸಹಕಾರವಾಗಿ ಚಿಕ್ಕಮುಡ್ನೂರು ಕಲಿಯುಗ ಸೇವಾ ಸಮಿತಿಯಿಂದ ರು. 5555 ದೇಣಿಗೆಯಾಗಿ ನೀಡಲಾಗಿದೆ.





ಬೇರೆ ಬೇರೆ ಕಡೆಗಳಿಂದ ಜನ ನಾಯಿ ಮರಿಗಳನ್ನು ನಗರ ಪ್ರದೇಶದಲ್ಲಿ ಬಿಟ್ಟು ಹೋಗುತ್ತಿರುವ ಕಾರಣ ಅನಾಥ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ಈ ಮೂಖ ಪ್ರಾಣಿಗಳನ್ನು ಕಳೆದ ಹಲವು ವರ್ಷಗಳಿಂದ ತನ್ನ ದಿನನಿತ್ಯದ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಆಹಾರ ಮತ್ತು ಚಿಕಿತ್ಸೆಯನ್ನು ನೀಡಿ ಆಹಾರವಿಲ್ಲದೆ ಅಲೆದಾಡುತ್ತಿರುವ ಬೀದಿನಾಯಿಗಳಿಗೆ ಬಡತನದ (ಅರಿವಾಗದಂತೆ) ಪೋಷಿಸುತ್ತಿರುವ ರಾಜೇಶ್ ಬನ್ನೂರು ಅವರಿಗೆ ಸಮಿತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಮುಂದೆಯೂ ಸಹಾಯಧನದ ಭರವಸೆಯನ್ನು ನೀಡಲಾಗಿದೆ. ರಾಜೇಶ್ ಬನ್ನೂರು ಮತ್ತು ರಾಮದಾಸ್ ಹಾರಾಡಿ ಇವರು ದೇಣಿಗೆ ಸ್ವೀಕರಿಸಿ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಗಣೇಶ್ ಆಚಾರ್ಯ, ಸತೀಶ್ ರೈ, ಪದ್ಮನಾಭ ಪ್ರಭು, ದೇವದಾಸ್, ಲಿಗೋರಿ ಸೆರಾವೋ, ರಮೇಶ್ ಕೆಮ್ಮಾಯಿ, ಸಂಪತ್ ಕುಮಾರ್ ಜೈನ್ ಉಪಸ್ಥಿತರಿದ್ದರು.












