





ಪುತ್ತೂರು:ಪುತ್ತೂರು ತಾಲೂಕು ಭೂನ್ಯಾಯ ಮಂಡಳಿಗೆ ನಾಮನಿರ್ದೇಶಿತ ಸದಸ್ಯರಾಗಿ ನಾಲ್ವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.








ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾಗಿರುವ ಕೋಡಿಂಬಾಡಿ ನಿವಾಸಿ ಜಯಾನಂದ ಕೆ.,ಎಪಿಎಂಸಿ ಮಾಜಿ ಸದಸ್ಯರಾಗಿರುವ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಬಾಬು ಬೊಮ್ಮನಗುಂಡಿ ಯಾನೆ ಕೊರಗು, ತಾ.ಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಒಳಮೊಗ್ರು ಗ್ರಾಮದ ಕೈಕಾರ ನಿವಾಸಿ ಹರೀಶ್ ಬಿಜತ್ರೆ ಹಾಗೂ ಬಡಗನ್ನೂರು ಗ್ರಾಮದ ಚಂದುಕೂಡ್ಲು ನಿವಾಸಿ ನ್ಯಾಯವಾದಿ ಪ್ರಶಾಂತ್ ಕುಮಾರ್ ಸಿ.ಹೆಚ್ ಅವರನ್ನು ತಾಲೂಕು ಭೂನ್ಯಾಯ ಮಂಡಳಿಗೆ ಅಧಿಕಾರೇತರ ಸದಸ್ಯರಾಗಿ ನಾಮನಿರ್ದೇಶನ ಮಾಡಿ ಸರಕಾರ ಆದೇಶ ಹೊರಡಿಸಿದೆ.ಜಯಾನಂದ ಕೆ.ಅವರು ಈ ಮೊದಲೂ ಮೂರು ವರ್ಷಗಳ ಕಾಲ ಭೂನ್ಯಾಯ ಮಂಡಳಿ ನಾಮನಿರ್ದೇಶಿತ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದು ಇದೀಗ ಎರಡನೇ ಬಾರಿಗೆ ನೇಮಕಗೊಂಡಿದ್ದಾರೆ.ಉಳಿದ ಮೂವರು ಮೊದಲ ಬಾರಿಗೆ ನೇಮಕಗೊಂಡವರು.


            






