ವೈಜ್ಞಾನಿಕ ಕೊಕ್ಕೋ ಬೆಳೆಯುವುದರಿಂದ ಅಧಿಕ ಲಾಭ; ಎಸ್. ಅಂಗಾರ
ಕಡಬ: ಅಡಿಕೆ ಮತ್ತು ತೆಂಗಿನ ಬೆಳೆಗಳನ್ನು ಹೊರತು ಪಡಿಸಿ ಹೆಚ್ಚುವರಿ ಆದಾಯವನ್ನು ಕೊಕ್ಕೋ ಬೆಳೆಯಿಂದ ಪಡೆಯಬಹುದು. ಕೃಷಿಕರು ಕೊಕ್ಕೋ ವನ್ನು ವೈಜ್ಞಾನಿಕವಾಗಿ ಬೆಳೆಯಬೇಕು. ಈ ಮೂಲಕ ಅಧಿಕ ಆದಾಯ ಪಡೆದು ಲಾಭ ಗಳಿಸಬಹುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ಅವರು ಬಿಳಿನೆಲೆಯ ಕಿದು ಸಿ.ಪಿ.ಸಿ.ಆರ್.ಐ. ಸಂಸ್ಥೆಯಲ್ಲಿ ನಡೆಯುತ್ತಿರುವ ಬೃಹತ್ ಕೃಷಿ ಮೇಳ ಮತ್ತು ಕೃಷಿ ವಸ್ತು ಪ್ರದರ್ಶನದ ಮೂರನೇ ದಿನವಾದ ಸೋಮವಾರ ಕೊಕ್ಕೋ ಉತ್ಪಾದನೆ ಮತ್ತು ಸಂಸ್ಕರಣೆಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರೈತರು ತಮ್ಮ ಕೃಷಿಗಳಲ್ಲಿ ವೈಜ್ಞಾನಿಕತೆ ಅಳವಡಿಸಿಕೊಂಡು ನಷ್ಟ ತಪ್ಪಿಸಬೇಕು. ವೈಜ್ಞಾನಿಕ ಕೃಷಿ ಪದ್ಧತಿಯಲ್ಲಿ ಆದಾಯ ಹೆಚ್ಚಳ ಮಾಡಲು ಸಾಧ್ಯವಿದೆ ಎಂದ ಅವರು ಒಳನಾಡು ಮೀನುಗಾರಿಕೆ ಕೃಷಿಯಲ್ಲೂ ಹೆಚ್ಚಿನ ಆದಾಯ ಗಳಿಕೆ ಸಾಧ್ಯವಿದೆ ಎಂದು ತಿಳಿಸಿದರು. ಸಂಸ್ಥೆಯ ಡಾ.ಕೆ.ಬಿ.ಹೆಬ್ಬಾರ್, ಡಾ.ನಿರಲ್, ಡಾ.ಜೆರಾಲ್ಡ್, ಗೋಪಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ನಿರಲ್ ಸ್ವಾಗತಿಸಿ, ವಂದಿಸಿದರು.
ಜನರ ದಂಡು;
ಮೂರನೇ ದಿನಕ್ಕೆ ಕಾಲಿಟ್ಟಿರುವ ಬೃಹತ್ ಕೃಷಿ ಸಮ್ಮೇಳನದಲ್ಲಿ ಬಾರೀ ಸಂಖ್ಯೆಯ ಜನರು ಭಾಗವಹಿಸುತ್ತಿದ್ದಾರೆ. ಸಾವಿರಾರು ಜನರು ಕೃಷಿ ವಸ್ತು ಪ್ರದರ್ಶನ ವೀಕ್ಷಿಸಿ ಮಾಹಿತಿ ಪಡದುಕೊಳ್ಳುತ್ತಿದ್ದಾರೆ. ಕೃಷಿ ಪ್ರದರ್ಶನದ ಎಲ್ಲಾ ಸ್ಟಾಲ್ ಗಳು ಜನರಿಂದಲೇ ತುಂಬಿರುತ್ತಿದ್ದು, ಜನರು ಆಸಕ್ತಿಯಿಂದ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.