ಉಪ್ಪಿನಂಗಡಿ: ಹಿಂದೂ ಸಮಾಜ ರಕ್ಷಿಸಲು ದೈವೀ ಶಕ್ತಿಗೆ ಮೊರೆ

0

ಉಪ್ಪಿನಂಗಡಿ: ವಶೀಕರಣ, ತಂತ್ರಗಾರಿಕೆ, ಬ್ಲಾಕ್‌ಮೇಲ್ ನಂತಹ ಮೋಸಗಳಿಂದ ಹಿಂದೂ ಹುಡುಗಿಯರನ್ನುಲವ್ ಜಿಹಾದ್ ಮೂಲಕ ಹತ್ಯೆ ಮಾಡುತ್ತಿರುವ ಕೃತ್ಯಗಳ ವಿರುದ್ದ ದೈವೀ ಶಕ್ತಿಗಳಿಂದ ನ್ಯಾಯ ನಿರ್ಧಾರವನ್ನು ಬಯಸಿ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯಿಂದ ಶ್ರೀ ದೇವರಿಗೆ ಪ್ರಾರ್ಥನೆ ಹಾಗೂ ಪವಿತ್ರ ನೇತ್ರಾವತಿ – ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ನ.22ರಂದು ರಾತ್ರಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಗಂಗಾಮಾತೆಗೆ ಹಣತೆಗಳನ್ನು ಸಮರ್ಪಿಸಿದರು.

ಈ ಸಂಧರ್ಭದಲ್ಲಿ ವೇದಮೂರ್ತಿ ಹರೀಶ್ ಉಪಾಧ್ಯಾಯ ರವರು ಶ್ರೀ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಶ್ರೀನಿಧಿ ಉಪಾಧ್ಯಾಯರವರು ವೇದ ಮಂತ್ರ ಪಠಿಸಿದರು. ನದಿ ಸಂಗಮ ಸ್ಥಳದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಭಜನಾ ಮಂಡಳಿ ಸದಸ್ಯರು , ಹಿಂದೂ ಕುಟುಂಬ ಗಳನ್ನು ನಾಶ ಪಡಿಸುವ ಸಲುವಾಗಿ ಹಿಂದೂ ಹೆಣ್ಣು ಮಕ್ಕಳನ್ನು ಮೋಸದಾಟಕ್ಕೆ ಸಿಲುಕಿಸಿ ಹತ್ಯೆ, ಆತ್ಮಹತ್ಯೆ ಮುಂತಾದ ಪ್ರೇರಣೆಯಂತಹ ಕೃತ್ಯಗಳನ್ನು ಯೋಜನಾಬದ್ದವಾಗಿ ದುಷ್ಟ ಶಕ್ತಿಗಳು ನಡೆಸುತ್ತಿದೆ. ಇಂತಹ ವಿಷಮ ಸನ್ನಿವೇಶದಲ್ಲಿ ದೈವೀ ಶಕ್ತಿ ಮಧ್ಯೆ ಪ್ರವೇಶಿಸಿ ಹಿಂದೂ ಸಮಾಜದ ರಕ್ಷಣೆಗೆ ಸಹಕರಿಸಬೇಕು. ದುಷ್ಟ ಸಂಹಾರ ಹಾಗೂ ಶಿಷ್ಟರ ರಕ್ಷಕರಾಗಿ ಮತ್ತೊಮ್ಮೆ ಈ ಮಣ್ಣಿನಲ್ಲಿ ದೈವೀ ಶಕ್ತಿಗಳು ತಮ್ಮ ವಿರಾಟ ಸ್ವರೂಪವನ್ನು ಅನಾವರಣಗೊಳಿಸಬೇಕೆಂದು ಪ್ರಾರ್ಥಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ಶರತ್ ಕೋಟೆ, ಕಾರ್ಯದರ್ಶಿ ಮಾಧವ ಆಚಾರ್ಯ, ಕಂಗ್ವೆ ವಿಶ್ವನಾಥ ಶೆಟ್ಟಿ, ಬಿಪಿನ್, ಸುಧಾಕರ ಶೆಟ್ಟಿ, ಚಂದ್ರಶೇಖರ್ ಮಡಿವಾಳ, ಯತೀಶ್ ಶೆಟ್ಟಿ, ಐ ಸುಧಾಕರ ನಾಯಕ್, ಕಿಶೋರ್ ಕುಮಾರ್ ಜೋಗಿ, ಕೆ. ಜಗದೀಶ್ ಶೆಟ್ಟಿ, ಉದಯಕುಮಾರ್ ಯು.ಎಲ್., ಹರೀಶ್ ಭಂಡಾರಿ, ಅನುರಾಗ್, ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here