ಅಧ್ಯಕ್ಷರಾಗಿ ಆರ್.ಎಂ ಅಲಿ ಹಾಜಿ, ಪ್ರ.ಕಾರ್ಯದರ್ಶಿ: ಝೈನುದ್ದೀನ್ ಜೆ.ಎಸ್
ಪುತ್ತೂರು: ಬದ್ರಿಯಾ ಜುಮಾ ಮಸೀದಿ ರೆಂಜಲಾಡಿ ಇದರ 2022 -23ನೇ ಸಾಲಿನ ನೂತನ ಅಧ್ಯಕ್ಷರಾಗಿ ಆರ್.ಎಂ ಅಲಿ ಹಾಜಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ವಿ.ಎಚ್ ಅಬ್ದುಲ್ ಶಕೂರ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ಝೈನುದ್ದೀನ್ ಹಾಜಿ ಜೆ.ಎಸ್, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಕಲ್ಪಣೆ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ಇಮ್ರಾನ್ ಮಲ್ನಾಡ್ ಹಾಗೂ ಜಿ.ಎ ಮಹಮ್ಮದ್ ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಹೀಂ ರೆಂಜಲಾಡಿ ಮತ್ತು ಅಬ್ದುಲ್ ಅಝೀಝ್ ರೆಂಜಲಾಡಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಇಬ್ರಾಹಿಂ ಕಡ್ಯ, ಅಬ್ದುಲ್ ರಹಿಮಾನ್ ಪರಾಡ್, ಹಸೈನಾರ್ ಡಿಪಿಒ, ಮಹಮ್ಮದ್ ಕೆಜಿಎನ್, ಇಸಾಕ್ ಎಸ್ಪಿಟಿ, ಅಮೀರ್ ರೆಂಜಲಾಡಿ, ಯೂಸುಫ್ ಎ, ಇಬ್ರಾಹಿಂ ಕಟ್ಟತ್ತಡ್ಕ, ಹಸೈನಾರ್ ಎಚ್, ಹಸನ್ ಆರ್, ಇಬ್ರಾಹಿಂ ಎ ಹಾಗೂ ಅಬ್ದುಲ್ ರಹಿಮಾನ್ ಎಂ.ಎ ಆಯ್ಕೆಯಾದರು.
ಸಲಹಾ ಸಮಿತಿ ಸದಸ್ಯರುಗಳಾಗಿ ಇಬ್ರಾಹಿಂ ಕಡ್ಯ, ರಫೀಕ್ ಫೈಝಿ, ಅಬೂಬಕ್ಕರ್ ಮುಸ್ಲಿಯಾರ್, ಮುಹಮ್ಮದ್ ಕೆಜಿಎನ್ ಹಾಗೂ ಇಬ್ರಾಹಿಂ ಎ ಅವರನ್ನು ಆಯ್ಕೆ ಮಾಡಲಾಯಿತು.
ನಿರ್ಗಮನ ಅಧ್ಯಕ್ಷ ಇಬ್ರಾಹಿಂ ಅಧ್ಯಕ್ಷ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರೆಂಜಲಾಡಿ ಮಸೀದಿಯ ಖತೀಬ್ ರಫೀಕ್ ಫೈಝಿ ಮಾಡನ್ನೂರು ದುವಾ ನೆರವೇರಿಸಿದರು.