ಪಾಂಗಳಾಯಿ ಅರಸು ಮುಂಡ್ಯತ್ತಾಯ ದೈವಸ್ಥಾನದ ವಾರ್ಷಿಕ ಮಹಾಸಭೆ: ಅನ್ನಚತ್ರದ ಜಾಗ ಖರೀದಿಗೆ ಚದರ ಅಡಿಗೆ ರೂ.300ರಂತೆ ಸೇವೆ ಸಲ್ಲಿಸಲು ಅವಕಾಶ

0

ಪುತ್ತೂರು: ಪರ್ಲಡ್ಕ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯು ನ.27ರಂದು ದೈವಸ್ಥಾನದ ಅರಸು ಮುಂಡ್ಯತ್ತಾಯ ಸಭಾಭವನದಲ್ಲಿ ನಡೆಯಿತು.


ಸಭೆಯಲ್ಲಿ ದೈವಸ್ಥಾನಕ್ಕೆ ಚತ್ರಕ್ಕೆ ಜಾಗ ಖರೀದಿಸುವ ಪ್ರಕ್ರಿಯೆಯ ಬಗ್ಗೆ ಚರ್ಚಿಸಲಾಯಿತು. ಗ್ರಾಮದ ದೈವಸ್ಥಾನವಾಗಿರುವುದರಿಂದ ಜಾಗ ಖರೀದಿಯಲ್ಲಿ ಗ್ರಾಮಸ್ಥರು ಹಾಗೂ ಭಕ್ತಾದಿಗಳಿಗೂ ಸೇವೆ ಸಲ್ಲಿಸುವ ಅವಕಾಶ ಕಲ್ಪಿಸಲಾಗುತ್ತಿದ್ದು ಪ್ರತಿ‌ ಚದರ ಅಡಿ ಜಾಗಕ್ಕೆ ರೂ.300ರಂತೆ ಪಾವತಿಸಿ, ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ದೈವಸ್ಥಾನದ ಹಾಲಿ ಆಡಳಿತ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿಯನ್ನೇ ಮುಂದುವರಿಸಲು ಮಹಾಸಭೆಯ ಅನುಮೋದನೆ ನೀಡಿತು.



ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ತಾರಾನಾಥ ರೈ ಮಾತನಾಡಿ, ಗ್ರಾಮಸ್ಥರು, ಕಾರ್ಯಕರ್ತರು ಹಾಗೂ ಭಕ್ತಾದಿಗಳ ದೇಣಿಗೆ, ಪರಿಶ್ರಮದ ಫಲ, ಪಾರದರ್ಶಕ ಆಡಳಿತದಿಂದಾಗಿ ಕ್ಷೇತ್ರದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಾ ಬಂದಿದೆ. ಅನ್ನ ಚತ್ರಕ್ಕೆ ಜಾಗ ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಖರೀದಿಸಿದ ಬಳಿಕ ಜಾಗದ ಪೂರ್ಣ ನೀಲ ನಕಾಶೆ ತಯಾರಿಸಿ ಮುಂದಿನ ಅಭಿವೃದ್ಧಿ ಕಾರ್ಯಗಳ ಯೋಜನೆ ಹಾಕಿಕೊಳ್ಳಲಾಗುವುದು. ದೈವಸ್ಥಾನದ ಅಭಿವೃದ್ಧಿ ಹಾಗೂ ವಾರ್ಷಿಕ ನೇಮೋತ್ಸವದ ಯಶಸ್ಸಿನಲ್ಲಿ ಸಹಕರಿಸುವಂತೆ ಮನವಿ ಮಾಡಿದರು. ಉಪಾಧ್ಯಕ್ಷ ಉಮಾಶಂಕರ್ ಪಾಂಗಳಾಯಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾರ್ಷಿಕ ನೇಮೋತ್ಸವ ಹಾಗೂ ಅನ್ನ ಚತ್ರದ ಜಾಗ ಖರೀದಿಗೆ ಮಹಾಸಭೆಯಲ್ಲಿ ಮುತ್ತು ಸ್ವಾಮಿಯವರು ರೂ.10,005 ದೇಣಿಗೆ ನೀಡಿದರು.
ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಾಜಿ ಕೋಶಾಧಿಕಾರಿ ಸೂರಪ್ಪ ಗೌಡ ವಂದಿಸಿದರು ಕಾರ್ಯದರ್ಶಿ ಪುರುಷೋತ್ತಮ ನಾಕ್ ಆಮಂತ್ರಣ ಪತ್ರಿಕೆಯನ್ನು ಮಂಡಿಸಿದರು. ಕೋಶಾಧಿಕಾರಿ ಸರೋಜಿನಿ ಪಿ.ಎಸ್ ಲೆಕ್ಕಪತ್ರ ಮಂಡಿಸಿದರು.


ಮಾಜಿ ಅಧ್ಯಕ್ಷರು, ಮಾಜಿ ಪದಾಧಿಕಾರಿಗಳು, ಸದಸ್ಯರು ಗ್ರಾಮಸ್ಥರು ಹಾಗೂ ಭಕ್ತಾದಿಗಳು ಮಹಾಸಭೆಯಲ್ಲಿ ಉಪಸ್ಥಿತರಿದ್ದರು.
ಈ ಫೋಟೋ ಲೀಡ್ ಹಾಕಿ

LEAVE A REPLY

Please enter your comment!
Please enter your name here