





ಪುತ್ತೂರು: ಕೊಳ್ತಿಗೆ ಗ್ರಾಮದ ಮಣಿಕ್ಕರ ಎಂಬಲ್ಲಿ ಕಾರ್ಣಿಕದ ಕೊರಗಜ್ಜ ಕ್ಷೇತ್ರದ ಪರಿವಾರ ದೈವಗಳಾದ ರಕ್ತೇಶ್ವರೀ, ನಾಗದೇವರು, ಗುಳಿಗ ಮತ್ತು ಕೊರಗಜ್ಜನ ಕ್ಷೇತ್ರ ನಿರ್ಮಾಣಕ್ಕಾಗಿ ನ.28 ರಂದು ವಾಸ್ತು ಶಿಲ್ಪಿ ಸುಂದರ ಪೂಜಾರಿ ಪಾಲ್ತಾಡಿ ಬಸಿರತ್ತಡ್ಕ ಭೂಮಿ ಪೂಜೆ ನಡೆಸಿ ಶೀಲಾನ್ಯಾಸವನ್ನು ನೇರವೇರಿಸಿದರು.








ಧರ್ಮದರ್ಶಿ ಬಾಬು ಮಣಿಕ್ಕರ ಅವರ ಉಪಸ್ಥಿತಿಯಲ್ಲಿ ಪರಿವಾರ ದೈವಗಳ ಕಟ್ಟೆ ನಿರ್ಮಾಣದ ಬಗ್ಗೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. ಕಾವು ಹೇಮನಾಥ್ ಶೆಟ್ಟಿ ಯವರ ಮುಂದಾಳತ್ವ ಮತ್ತು ಮಾರ್ಗದರ್ಶನದಲ್ಲಿ ಭೂಮಿಪೂಜೆ ಮೂಲಕ ಶ್ರೀ ನಾಗದೇವರು ಮತ್ತು ಪರಿವಾರ ದೈವಗಳ ಕಟ್ಟೆ ನಿರ್ಮಾಣಕ್ಕೆ ಚಾಲನೆ ನೀಡಿದರು.
ಮುಂದಿನ ಫೆಬ್ರವರಿ ತಿಂಗಳಲ್ಲಿ ಕ್ಷೇತ್ರ ನಿರ್ಮಾಣ ಕಾರ್ಯಗಳನ್ನು ಪೂರ್ಣಗೊಳಿಸಿ ಬ್ರಹ್ಮಕಲಶೋತ್ಸವ ನಡೆಸಲು ತೀರ್ಮಾನಿಸಲಾಯಿತು. ಡಿ.5 ರಂದು ಜನಪ್ರತಿನಿದಿಗಳ, ಧಾರ್ಮಿಕ, ಸಾಮಾಜಿಕ ಮುಖಂಡರ ಸಭೆಯನ್ನು ಕರೆಯಲಾಗಿದೆ ಎಂದು ಹೇಮನಾಥ್ ಶೆಟ್ಟಿ ಯವರು ತಿಳಿಸಿದರು.
ಈ ಸಂಧರ್ಭದಲ್ಲಿ ಶ್ರೀ ಕೊರಗಜ್ಜ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಮಾಧವ ಪಾಲ್ತಾಡು, ಚಂದ್ರಶೇಖರ ಮಾಲೆತ್ತೋಡಿ, ಸತೀಶ್ ಪಂಜಿಗೆದಡಿ,ಪಿಜಿನ ಪಂಜಿಗೆದಡಿ, ಶಶಿಧರ ಪಾಲ್ತಾಡ್, ಪ್ರತಾಪ್ ಪಾಲ್ತಾಡು, ಮೀನಾಕ್ಷಿ ಪಾಲ್ತಾಡು, ಗಣೇಶ್, ಹಾಗೂ ಮೇಸ್ತ್ರಿ ಗೋಪಾಲ ಮಣಿಯಾಣಿ ಬಾಯಂಬಾಡಿ ಮುಂತಾದವರು ಉಪಸ್ಥಿತರಿದ್ದರು.









