ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ದಿ. ಎಂ ರಾಮ ಜೋಯಿಸ್ ಸ್ಮರಣಾರ್ಥ ಮೊದಲ ದತ್ತಿ ಉಪನ್ಯಾಸ

0

ವಕೀಲ ವೃತ್ತಿ ಎಲ್ಲಾ ವೃತ್ತಿಗಳಿಗಿಂತಲೂ ಸರ್ವಶ್ರೇಷ್ಠ: ಜಿ.ಕೆ ಪರಮೇಶ್ವರ ಜೋಯಿಸ್

ವಕೀಲ ವೃತ್ತಿ ಎಲ್ಲಾ ವೃತ್ತಿಗಳಿಗಿಂತಲೂ ಸರ್ವಶ್ರೇಷ್ಠವಾಗಿದ್ದು. ದೇಶದಲ್ಲಿ ವಕೀಲಿ ವೃತ್ತಿಯ ಕೋರ್ಸ್‌ಗಳಿಗೆ ಎರಡನೇ ಸ್ಥಾನಮಾನವಿದೆ. ವಿದ್ಯಾರ್ಥಿಗಳು ಆದುನಿಕ ಸೌಲಭ್ಯಗಳ ಬಳಕೆ ಹಾಗೂ ಕಠಿಣ ಪರಿಶ್ರಮದಿಂದ ಉತ್ತಮ ವಕೀಲರಾಗಬೇಕು ಎಂದು ಮಂಗಳೂರಿನ ಹಿರಿಯ ನ್ಯಾಯವಾದಿಗಳಾದ ಶ್ರೀ ಜಿ ಕೆ ಪರಮೇಶ್ವರ ಜೋಯಿಸ್ ಹೇಳಿದರು.

ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ನಿವೃತ ಮುಖ್ಯ ನ್ಯಾಯಮೂರ್ತಿಗಳಾದ ದಿ. ಎಂ ರಾಮ ಜೋಯಿಸ್ ಸ್ಮರಣಾರ್ಥ ಮೊದಲ ದತ್ತಿ ಉಪನ್ಯಾಸವನ್ನು ನೀಡಿದ ಕಾನೂನು ಮತ್ತು ಭಾರತದಲ್ಲಿ ವಕೀಲ ವೃತ್ತಿಯ ವಿಷಯದ ಕುರಿತು ವಿಶೇಷ ಉಪನ್ಯಾಸಕ ನೀಡಿದ ಅವರು, ಕಾನೂನು ಕಾಪಾಡುವುದು ಹಾಗೂ ತಮ್ಮ ವೃತ್ತಿಗೆ ನಿಷ್ಠಾನಾಗಿರುವುದು ಇಂದಿನ ಕಾಲದ ಅನಿವಾರ್ಯವಾಗಿದೆ. ವಕೀಲ ವೃತ್ತಿಗೆ ತನ್ನದೇ ಆದ ಘನತೆ ಇದ್ದು, ವೃತ್ತಿಪರ ಮನಸ್ಸುಳ್ಳವರು ಮಾತ್ರ ಅದರಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಜೀವನದ ಬಹುತೇಕ ಸಮಯವನ್ನು ಇದಕ್ಕೆ ಮೀಸಲಿಡುವ ಅಗತ್ಯವಿದೆ. ಇಲ್ಲವಾದರೆ, ಯಶಸ್ಸು ಸಿಗುವುದು ತೀರಾ ಕಷ್ಟ. ಇಲ್ಲದಿದ್ದರೆ ಕಾನೂನಿನ ಮೌಲ್ಯಕ್ಕೆ ಧಕ್ಕೆ ಉಂಟಾಗಲಿದೆ ಎಂದು ಹೇಳಿದರು.

ವೇದಿಕೆಯಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ ರವೀಂದ್ರ ಉಪಸ್ಥಿತರಿದ್ದರು. ಕಾನೂನು ಸಹಾಯಕ ಪ್ರಾಧ್ಯಾಪಕಿ ಸುಭಾಸಿಣಿ ಜೆ ಸ್ವಾಗತಿಸಿ, ಕಾನೂನು ಸಹಾಯಕ ಪ್ರಾಧ್ಯಾಪಕಿ ಡಾ. ರೇಖಾ ಕೆ ವಂದಿಸಿದರು. ಆಂಗ್ಲ ಸಹಾಯಕ ಪ್ರಾಧ್ಯಾಪಕಿ ಸಂಧ್ಯಾ ಪಿ ಎಂ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಸಂಚಾಲಕರಾದ ವಿಜಯನಾರಾಯಣ ಕೆ.ಎಂ. ಸೇರಿದಂತೆ ಬೋಧಕ-ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here