ಡಿ.3,4: ಪಡ್ನೂರು ಶ್ರೀರಾಮ್ ಫ್ರೆಂಡ್ಸ್‌ನ ದಶಮಾನೋತ್ಸವ ಪ್ರಯುಕ್ತ `ನಮ್ಮೂರ ಹಬ್ಬ’

0

ವೀರ ಸಾವರ್ಕರ್ ಟ್ರೋಫಿ ಕಬಡ್ಡಿ ಪಂದ್ಯಾಟ, ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ಕಳೆದ ಹಲವು ವರ್ಷಗಳಿಂದ ವಿವಿಧ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿರುವ ಪುತ್ತೂರು ಪಡ್ನೂರಿನ ಶ್ರೀರಾಮ್ ಫ್ರೆಂಡ್ಸ್‌ನ ದಶಮಾನೋತ್ಸವದ ಪ್ರಯುಕ್ತ `ನಮ್ಮೂರ ಹಬ್ಬ’ ಕಾರ್ಯಕ್ರಮ ಡಿ.3 ಮತ್ತು 4 ರಂದು ಪಡ್ನೂರು ಶಾಲಾ ವಠಾರದಲ್ಲಿ ನಡೆಯಲಿದೆ.

ದಿವಂಗತ ಕೇಶವ ಗೌಡ ಬಜತ್ತೂರು ವೇದಿಕೆಯಲ್ಲಿ ಮಹಾವೀರ ಮೆಡಿಕಲ್ ಸೆಂಟರ್ ಪುತ್ತೂರು ಮತ್ತು ಮಂಗಳೂರಿನ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು ಇದರ ಸಹಕಾರದೊಂದಿಗೆ ರಕ್ತದಾನ ಶಿಬಿರ, ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹಿಂದೂ ಬಾಂಧವರಿಗಾಗಿ ಪುರುಷರ ಹೊನಲು ಬೆಳಕಿನ 55 ಕೆ.ಜಿ ವಿಭಾಗದ ಮತ್ತು ಸೂರ್ಯ ಬೆಳಕಿನ ಮುಕ್ತ ವಿಭಾಗದ ಪ್ರೊ. ಮಾದರಿಯ ಕಬಡ್ಡಿ ಪಂದ್ಯಾಟ ವೀರ ಸಾವರ್ಕರ್ ಟ್ರೋಫಿ-2022 ಕರುಣೋದಯ ಮ್ಯಾಟ್ ಅಂಕಣದಲ್ಲಿ ನಡೆಯಲಿದೆ ಎಂದು ಸುದ್ದಿ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀರಾಮ್ ಫ್ರೆಂಡ್ಸ್‌ನ ಗೌರವಾಧ್ಯಕ್ಷ ನವೀನ್ ಪಡ್ನೂರು ತಿಳಿಸಿದರು.

ಡಿ. 3ರಂದು ಬೆಳಿಗ್ಗೆ 9.30 ಕ್ಕೆ ವೈದ್ಯಕೀಯ ಶಿಬಿರವನ್ನು ಆದರ್ಶ ಆಸ್ಪತ್ರೆಯ ವೈದ್ಯ ಡಾ|ಪ್ರಸಾದ್.ಎಂ.ಕೆ. ಉದ್ಘಾಟನೆ ನೆರವೇರಿಸಲಿದ್ದಾರೆ. ಮಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ಮಹಾವೀರ ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಪುತ್ತೂರಾಯ, ಪುತ್ತೂರು ಪಾಲಿಕ್ಲಿನಿಕ್‌ನ ಕನ್ಸಲ್ಟೆಂಟ್ ಆರ್ಥೋಪೆಡಿಕ್ ಸರ್ಜನ್ ಡಾ|ಸಚಿನ್ ಶಂಕರ್ ಹಾರಕರೆ, ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನ ಡಾ| ರಾಮಚಂದ್ರ ಭಟ್, ಪ್ರಗತಿಪರ ಕೃಷಿಕ ಜನಾದನ ಭಟ್ ಸೇಡಿಯಾಪು, ಪಡ್ನೂರು ಶಿರಾಡಿ ಕಲ್ಕುಡ, ಪಂಜುರ್ಲಿ ಮತ್ತು ಪರಿವಾರ ದೈವಗಳ ಸೇವಾ ಸಮಿತಿಯ ಅಧ್ಯಕ್ಷ ರಾಜೇಶ್ ಭಟ್ ಕುಂಬಾಡಿ, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಮತ್ತಾವು ಅಧ್ಯಕ್ಷ ವಾಸು ಪೂಜಾರಿ ಕೊಡಂಗೆ, ಪಡ್ನೂರು ಜನಾರ್ದನ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಆಟಕ್ಕು, ಪಡ್ನೂರು ಯರ್ಮುಂಜಪಳ್ಳ ಗೆಳೆಯರ ಬಳಗದ ಅಧ್ಯಕ್ಷ ಕುಶಲ ಗೌಡ ಪಳ್ಳ, ಬೇರಿಕೆ ಆದಿಶಕ್ತಿ ಭಜನಾ ಮಂದಿರದ ಅಧ್ಯಕ್ಷ ಕೃಷಪ್ಪ ಮೂಲ್ಯ, ಪಡ್ಡಾಯೂರು ಅನ್ನಪೂರ್ಣೇಶ್ವರೀ ಭಜನಾ ಮಂದಿರದ ಅಧ್ಯಕ್ಷ ಗಣೇಶ್ ಪಡ್ಡಾಯೂರು, ಪಡ್ನೂರು ಸರಸ್ವತಿ ಯುವಕ ಮಂಡಲದ ಅಧ್ಯಕ್ಷೆ ರೇವತಿ ಪಂಜಿಗುಡ್ಡೆ, ಪಡ್ನೂರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷ ತಿಮ್ಮಪ್ಪ ಶಾಲಾಬಳಿ, ಪಡ್ನೂರು ದ.ಕ.ಜಿ.ಪ.ಉ.ಹಿ.ಪ್ರಾ.ಶಾಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಸೀತಾರಾಮ ಬೇರಿಕೆ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರಾಮಣ್ಣ ಗೌಡ, ದೇಂತಡ್ಕ ಶ್ರೀ ವನಶಾಸ್ತಾರ ದೇವಸ್ಥಾನದ ಅಧ್ಯಕ್ಷ ಶಿವರಾಮ ನಾಕ್ ಭಾಗವಹಿಸಲಿದ್ದಾರೆ.

ಸಂಜೆ ಗಂಟೆ 6ರಿಂದ ಅಂಗನವಾಡಿ ಪುಟಾಣಿಗಳು, ಶಾಲಾ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 7 ರಿಂದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ನಿರ್ದೇಶನದಲ್ಲಿ ನಾಟ್ಯರಂಗ ಪುತ್ತೂರು ಪ್ರಸ್ತುತಿಯಲ್ಲಿ `ನಾಟ್ಯಲಹರಿ’ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದರು.

ರಾತ್ರಿ ಗಂಟೆ 8.30 ಕ್ಕೆ ಕಬಡ್ಡಿ ಪಂದ್ಯಾಟದ ಉದ್ಘಾಟನೆ ನೆರವೇರಲಿದ್ದು, ಮದಗ ಶ್ರೀ ಜನಾರ್ದನ ದೇವಸ್ಥಾನ ಕುಂಜಾರು ಪಡ್ನೂರು ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೆಂಕಟ್ರಮಣ ಭಟ್ ಹಾರಕೆರೆ ದೀಪಪ್ರಜ್ವಲನೆಗೈಯಲಿದ್ದಾರೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ ಭಟ್ ಹಸಂತಡ್ಕ, ಮಂಗಳೂರು ವಿಭಾಗ ಸಹ ಸಂಚಾಲಕ ಅಜಿತ್ ರೈ ಹೊಸಮನೆ, ಬಿಜೆಪಿ ಪುತ್ತೂರು ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯ ಏಕ, ಉಪಾಧ್ಯಕ್ಷೆ ಗೀತಾ ಕೊಡಂಗೆ, ಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀನಿವಾಸ್ ಪೆರ್ವೋಡಿ, ಗಣೇಶ್ ಪಳ್ಳ ಬನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ವಿಮಲಾ ಹರೀಶ್, ರಮಣಿ ಡಿ ಗಾಣಿಗ, ಶಶಿಧರ ಗೌಡ ಪಂಜಿಗುಡ್ಡೆ ಭಾಗವಹಿಸಲಿದ್ದಾರೆ. ರಾತ್ರಿ ೯ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಡಿ.4ರಂದು ಬೆಳಗ್ಗೆ 10 ಗಂಟೆಗೆ ಮುಕ್ತ ವಿಭಾಗದ ಕಬಡ್ಡಿ ಪಂದ್ಯಾಟ ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಗಂಟೆ 6ರಿಂದ ಮಾತೆಯರನ್ನು ಅರಸಿನ ಕುಂಕುಮ ಮತ್ತು ಗಾಜಿನ ಬಳೆ ನೀಡಿ ಸ್ವಾಗತಿಸುವ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 7 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಬಿಜೆಪಿ ರಾಜ್ಯ ವಕ್ತಾರ ವಿಕಾಸ್ ಪಿ., ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ ಆಳ್ವ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮುಂಬೈನ ಗಿರಿಜಾ ವೆಲ್‌ಫೇರ್ ಅಸೋಸಿಯೇಶನ್‌ನ ಅಧ್ಯಕ್ಷ ವಸಂತ ಸಫಲ್ಯ ಕುಂಜಾರು, ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಸಹಜ್ ರೈ ಬಳಜ್ಜ, ಮಂಗಳೂರು ಕಸ್ಟಮ್ಸ್ ಅಸಿಸ್ಟೆಂಟ್ ಕಮೀಷನರ್ ರಮೇಶ್ಚಂದ್ರ, ಯುವ ಉದ್ಯಮಿ ಜಯಗುರು ಆಚಾರ್ ಹಿಂದಾರ್, ಬಿಜೆಪಿ ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮುಕುಂದ ಗೌಡ ಬಜತ್ತೂರು, ಮುಗೇರ ಜವನೆರ ಕೂಟದ ಅಧ್ಯಕ್ಷ ವಿಜಯ್ ವಿಕ್ರಮ್, ಕ್ಲಾಸ್-1 ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ರಾಕೇಶ್ ಕುಮಾರ್ ಪರ್ಲಡ್ಕ ಭಾಗವಹಿಸಲಿದ್ದಾರೆ.

ವಿಶೇಷ ಅತಿಥಿಗಳಾಗಿ ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್, ಸಬ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ರಾಥೋಡ್, ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಮ ನಾಯ್ಕ, ಕಡಬ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ, ಪೂಂಜಾಲಕಟ್ಟೆ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುತೇಶ್, ಸುಬ್ರಹ್ಮಣ್ಯ ಠಾಣೆಯ ಸಬ್‌ಇನ್ಸ್‌ಪೆಕ್ಟರ್, ಮಂಜುನಾಥ, ಉಪ್ಪಿನಂಗಡಿ ಠಾಣೆಯ ಸಬ್ ಇನ್ಸ್‌ಪೆಕ್ಟರ್, ರಾಜೇಶ್ ಕೆ.ವಿ., ಸಂಪ್ಯ ಠಾಣೆ ಸಬ್ ಇನ್ಸ್‌ಪೆಕ್ಟರ್ ರಾಮಕೃಷ, ಪುತ್ತೂರು ಉಳ್ಳಾಲ್ತಿ ಫ್ಲವರ್ಸ್‌ನ ಹರೀಶ್ ಕಲ್ಲಾರೆ, ಪ್ರಶಾಂತ್ ಪಾಂಗ್ಲಾಯಿ ಉಪಸ್ಥಿತರಿರಲಿದ್ದಾರೆ. ರಾತ್ರಿ ೮ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. 9ಕ್ಕೆ ದೇವದಾಸ್ ಕಾಪಿಕಾಡ್ ಅಭಿನಯದ ಚಾಪರ್ಕ ಕಲಾವಿದರಿಂದ `ನಾಯಿದ ಬೀಲ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ನವೀನ್ ಪಡ್ನೂರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮ್ ಫ್ರೆಂಡ್ಸ್ ಪಡ್ನೂರು ಇದರ ಗೌರವ ಸಲಹೆಗಾರ ಶ್ರೀನಿವಾಸ ಪೆರ್ವೋಡಿ, ಕಾರ್ಯದರ್ಶಿ ಸುಹಾನ್, ಮೋನಪ್ಪ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here