ಎಲ್‌ಪಿಜಿ ಅಟೋ ಚಾಲಕರಿಗೆ ಸಂತಸದ ಸುದ್ದಿ

0

ಕೊಂಕಣ್ ಗ್ಯಾಸ್ ಸ್ಟೇಷನ್‌ನ ಟೋಟಲ್ ಎನರ್ಜಿಸ್ ಅಟೋ ಎಲ್‌ಪಿಜಿ ಇಂಧನ ಕೇಂದ್ರದಲ್ಲಿ ಗ್ಯಾಸ್ ತುಂಬಿಸಿ ಬಹುಮಾನಗಳನ್ನು ಗೆಲ್ಲಿರಿ…

ಪುತ್ತೂರು: ಎಲ್‌ಪಿಜಿ ಅಟೋ ಚಾಲಕರಿಗೆ ಕೊಂಕಣ್ ಗ್ಯಾಸ್ ಸ್ಟೇಷನ್‌ನ ಟೋಟಲ್ ಎನರ್ಜಿಸ್ ಅಟೋ ಎಲ್‌ಪಿಜಿ ಇಂಧನ ಕೇಂದ್ರದವರು ಒಂದು ಸಂತಸದ ಸುದ್ದಿಯನ್ನು ಹೇಳುತ್ತಿದ್ದಾರೆ. ಹೌದು.. ತಮ್ಮ ಅಟೋ ರಿಕ್ಷಾಕ್ಕೆ ಟೋಟಲ್ ಎನರ್ಜೀಸ್ ಎಲ್‌ಪಿಜಿ ಇಂಧನ ಕೇಂದ್ರಗಳಲ್ಲಿ ಗ್ಯಾಸ್ ತುಂಬಿಸುವುದು ಅಲ್ಲದೆ ಅದೃಷ್ಟಶಾಲಿಗಳು ಹಲವು ಬಂಪರ್ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳುವ ಸುವರ್ಣಾವಕಾಶ ಇದೆ. ನ.1 ರಿಂದ ಈ ಅವಕಾಶ ಆರಂಭವಾಗಿದ್ದು ದ.31 ರವರೇಗೆ ಮುಂದುವರಿಯಲಿದೆ. ಹಾಗಾದರೆ ತಡ ಯಾಕೆ ಇಂದೇ ಪುತ್ತೂರಿನ ನೆಹರೂನಗರ ಮತ್ತು ದರ್ಬೆಯಲ್ಲಿರುವ ಕೊಂಕಣ್ ಗ್ಯಾಸ್ ಸ್ಟೇಷನ್‌ನ ಟೋಟಲ್ ಎನರ್ಜೀಸ್ ಎಲ್‌ಪಿಜಿ ಇಂಧನ ಕೇಂದ್ರದಲ್ಲಿ ಗ್ಯಾಸ್ ತುಂಬಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳಿ…

ಟೋಟಲ್ ಎನರ್ಜೀಸ್ ಎಲ್‌ಪಿಜಿ ಇಂಧನ ಹಾಕಿ ಅದೃಷ್ಟ ಕೂಪನ್ ಪಡೆಯಿರಿ…: ಕೊಂಕಣ್ ಗ್ಯಾಸ್ ಸ್ಟೇಷನ್‌ನ ಟೋಟಲ್ ಎನರ್ಜೀಸ್ ಎಲ್‌ಪಿಜಿ ಇಂಧನ ಕೇಂದ್ರದಲ್ಲಿ 300 ರೂಪಾಯಿ ಮೌಲ್ಯದ ಎಲ್‌ಪಿಜಿ ತುಂಬಿಸಿದ ಪ್ರತಿ ಚಾಲಕರಿಗೆ ಒಂದು ಅದೃಷ್ಟ ಕೂಪನ್ ದೊರೆಯುತ್ತದೆ. ಅದೇ ಪ್ರತಿ 300 ರೂಪಾಯಿಯ ಎಲ್‌ಪಿಜಿಯನ್ನು ಪ್ರತಿ ಬಾರಿ ತುಂಬಿಸಿದಾಗಲೂ ಕೂಪನ್ ಕೊಡಲಾಗುತ್ತದೆ. ನಾವು ಎಷ್ಟು ಬಾರಿ ಎಲ್‌ಪಿಜಿ ತುಂಬಿಸುತ್ತೇವೋ ಅಷ್ಟೂ ಬಾರಿಯೂ ಅದೃಷ್ಟ ಕೂಪನ್ ದೊರೆಯುತ್ತದೆ. ಇದಲ್ಲದೆ ಟೋಟಲ್ ಮೋಟಾರ್ ಆಯಿಲ್ ಅಟೋಗ್ಯಾಸ್‌ನ್ನು ಒಂದು ಬಾರಿ ಎಂಆರ್‌ಪಿ ದರಕ್ಕೆ ಖರೀದಿಸಿದರೂ ಕೂಪನ್‌ಗಳನ್ನು ಪಡೆದುಕೊಂಡು ನಿಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳಬಹುದಾಗಿದೆ.

ಅಟೋ ರಿಕ್ಷಾದಿಂದ ಹಿಡಿದು ಎಲ್‌ಇಡಿ ಟಿವಿ ತನಕ ಗೆಲ್ಲಿರಿ…: ಟೋಟಲ್ ಎನರ್ಜೀಸ್ ಅಟೋ ಎಲ್‌ಪಿಜಿ ಗ್ಯಾಸ್ ತುಂಬಿಸುವ ಮೂಲಕ ಅಟೋ ಚಾಲಕರು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬಹುದು. ಬಂಪರ್ ಡ್ರಾದಲ್ಲಿ ಬಜಾಜ್ ರೇ ಅಟೋ ರಿಕ್ಷಾ, ದ್ವಿಚಕ್ರ ವಾಹನ, ವನ್ ಪ್ಲಸ್ ಮೊಬೈಲ್ ಫೋನ್, 185 ಲೀ.ಸಿಂಗಲ್ ಡೋರ್ ರೆಫ್ರಿಜರೇಟರ್, ಫುಲ್ಲೀ ಅಟೋಮ್ಯಾಟಿಕ್ ವಾಷಿಂಗ್ ಮೆಷಿನ್, 42 ಇಂಚಿನ ಎಲ್‌ಇಡಿ ಟಿವಿ ಮತ್ತು 32 ಇಂಚಿನ ಎಲ್‌ಇಡಿ ಟಿವಿಯನ್ನು ಗೆಲ್ಲಬಹುದಾಗಿದೆ.

ಹ್ಯಾಪೀ ಅವರ್….: ಬೆಳ್ಳಂಬೆಳಿಗ್ಗೆ ಅಟೋ ಓಡಿಸಿ ಸುಸ್ತಾಗಿದ್ದೀರಿ, ಚಹಾ ಕುಡಿಯಬೇಕು ಅಂತ ಅನ್ನಿಸುತ್ತಿದೆಯಾ? ಹೊಟೇಲ್‌ಗೆ ಹೋಗಬೇಕಾದ ಅನಿವಾರ‍್ಯತೆ ಇಲ್ಲ, ಎಲ್‌ಪಿಜಿ ಗ್ಯಾಸ್ ತುಂಬಿಸಿ ಅದರೊಟ್ಟಿಗೆ ಚಹಾ ಕೂಡ ಸವಿಯಬಹುದಾಗಿದೆ.ಹೌದು ರೂ.500 ಮೌಲ್ಯದ ಎಲ್‌ಪಿಜಿ ತುಂಬಿಸಿದಾಗ ಒಂದು ಕಪ್ ಚಹಾವನ್ನು ಉಚಿತವಾಗಿ ಸೇವಿಸಬಹುದು. ಇದು ಬೆಳಿಗ್ಗೆ 8.30 ರಿಂದ 10 ಗಂಟೆಯ ತನಕ ಮಾತ್ರ ಇರಲಿದೆ.

ಹೆಚ್ಚಿನ ಮಾಹಿತಿಗಾಗಿ: ನೆಹರೂನಗರ ಮತ್ತು ದರ್ಬೆಯಲ್ಲಿರುವ ಕೊಂಕಣ್ ಗ್ಯಾಸ್ ಸ್ಟೇಷನ್‌ನ ಟೋಟಲ್ ಎನರ್ಜೀಸ್ ಅಟೋ ಇಂಧನ ಕೇಂದ್ರ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆ ತನಕ ತೆರೆದಿರುತ್ತದೆ. ಹೆಚ್ಚಿನ ಮಾಹಿತಿಗೆ ಮೊ.9481377201 ಅಥವಾ 7760521089 ಗೆ ಕರೆ ಮಾಡಬಹುದು ಎಂದು ಇಂಧನ ಕೇಂದ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here