ವಾಹನ ಸಂಚಾರಕ್ಕೆ ಅಡ್ಡಿಯಾದ ವಿದ್ಯುತ್ ಕಂಬಗಳ ಸ್ಥಳಾಂತರ-ಭೂಗತ ಕೇಬಲ್ ಅಳವಡಿಸಲು ನಾಗರಿಕರ ಆಗ್ರಹ

0

ಪುತ್ತೂರು:ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂದು, ಕಾಂಕ್ರೀಟ್ ರಸ್ತೆ ಬದಿಯಲ್ಲಿದ್ದ ಎರಡು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ ಚರಂಡಿಯೊಳಗೆ ಅಳವಡಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಕಂಬಗಳನ್ನು ಸ್ಥಳಾಂತರಿಸಿ ಇದೀಗ ರಸ್ತೆಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆಯಾದರೂ ಚರಂಡಿಯಲ್ಲಿ ಅಳವಡಿಸಿರುವುದರಿಂದ ಮುಂದಿನ ದಿನಗಳಲ್ಲಿ ಮಳೆ ನೀರು ಹರಿಯಲು ಅಡ್ಡಿಯಾದರೆ ಕಂಬವನ್ನು ಮತ್ತೆ ಎಲ್ಲಿಗೆ ಸ್ಥಳಾಂತರ ಮಾಡುತ್ತಾರೆ ಎನ್ನುವ ನಾಗರಿಕರು, ಸ್ಥಳಾಂತರದ ನೆಪವೊಡ್ಡಿ ದುಂದು ವೆಚ್ಚ ಮಾಡುವ ಬದಲು ಭೂಗತ ಕೇಬಲ್ ಅಳವಡಿಸುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ನೆಲ್ಲಿಕಟ್ಟೆ ಭುವನೇಂದ್ರ ಕಲ್ಯಾಣ ಮಂಟಪದ ಬಳಿಯಿಂದ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ಹೋಗುವ ಕಾಂಕ್ರೀಟ್ ರಸ್ತೆಯಲ್ಲಿ ಎರಡು ಮೂರು ವಿದ್ಯುತ್ ಕಂಬಗಳು ಕಾಂಕ್ರೀಟ್ ರಸ್ತೆಯಲ್ಲೇ ಇದ್ದುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು.ಈ ನಿಟ್ಟಿನಲ್ಲಿ ಇತ್ತೀಚೆಗೆ ವಿದ್ಯುತ್ ಕಂಬಗಳ ಸ್ಥಳಾಂತರ ಮಾಡಲಾಯಿತು. ಒಂದು ವಿದ್ಯುತ್ ಕಂಬ ಹೊರತು ಪಡಿಸಿ ಎರಡು ವಿದ್ಯುತ್ ಕಂಬಗಳನ್ನು ಚರಂಡಿಯೊಳಗೆ ಅಳವಡಿಸಲಾಗಿರುವುದರಿಂದ ಮುಂದೆ ಮಳೆ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಲಿದೆ.ಆಗ ಮತ್ತೆ ವಿದ್ಯುತ್ ಕಂಬ ಸ್ಥಳಾಂತರ ಮಾಡಬೇಕಾದೀತು.ಈ ರೀತಿಯಲ್ಲಿ ಮತ್ತೆ ಮತ್ತೆ ಕಂಬಗಳ ಬದಲಾವಣೆ ಮಾಡುವ ಬದಲು ಭೂಗತ ಕೇಬಲ್ ಅಳವಡಿಕೆಯೇ ಸೂಕ್ತ ಎಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here