ಪ್ರ.ಕಾರ್ಯದರ್ಶಿಯಾಗಿ ಶಶಿಧರ ರೈ, ಕೋಶಾಧಿಕಾರಿಯಾಗಿ ಸಂಶುದ್ದೀನ್ ಸಂಪ್ಯ
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕರುಣಾಕರ ರೈ ಸಿ.ಎಚ್.,ಶೇಷಪ್ಪ ಕಜೆಮಾರ್,ಸುಧಾಕರ ತಿಂಗಳಾಡಿ, ಮೇಘ ಪಾಲೆತ್ತಡಿ, ಕುಮಾರ್ ಕೆ.ಕಲ್ಲಾರೆ,ಐ.ಬಿ.ಸಂದೀಪ್ ಕುಮಾರ್, ಉಮಾಶಂಕರ್ ಪಾಂಗ್ಲಾಯಿ, ಕೃಷ್ಣಪ್ರಸಾದ್ ಬಲ್ನಾಡು
ಪುತ್ತೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಘಟಕದ 15 ಸ್ಥಾನಗಳ ಪೈಕಿ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದು ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು 8 ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಡಿ.5ರಂದು ಚುನಾವಣೆ ನಡೆಯಿತು.
ಸಂಘದ ಅಧ್ಯಕ್ಷರಾಗಿ ಎ.ಸಿದ್ದಿಕ್ ನೀರಾಜೆ, ಉಪಾಧ್ಯಕ್ಷರಾಗಿ ಕಿರಣ್ಪ್ರಸಾದ್ ಕೆ.,ಮತ್ತು ಎಂ.ಎಸ್.ಭಟ್ ಉಪ್ಪಿನಂಗಡಿ, ಕಾರ್ಯದರ್ಶಿಗಳಾಗಿ ಅಜಿತ್ ಕುಮಾರ್ ಕೆ ಮತ್ತು ನಝೀರ್ ಕೊಯಿಲ ಅವಿರೋಧವಾಗಿ ಆಯ್ಕೆಯಾಗಿದ್ದರು.
ಉಳಿದಂತೆ ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಿತು. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪ್ರಜಾವಾಣಿ ಮತ್ತು ವಿಜಯವಾಣಿ ವರದಿಗಾರ ಶಶಿಧರ ರೈ ಕುತ್ಯಾಳ ಮತ್ತು ಸುದ್ದಿ ಬಿಡುಗಡೆ ಹಿರಿಯ ವರದಿಗಾರ ಲೋಕೇಶ್ ಬನ್ನೂರು ನಡುವೆ ಸ್ಪರ್ಧೆ ನಡೆದು ಶಶಿಧರ ರೈ ಕುತ್ಯಾಳ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿ ಹುದ್ದೆಗೆ ಸುದ್ದಿ ಬಿಡುಗಡೆ ಹಿರಿಯ ವರದಿಗಾರ ಶೇಖ್ ಜೈನುದ್ದೀನ್ ಮತ್ತು ವಾರ್ತಾಭಾರತಿ, ಕನ್ನಡಪ್ರಭ ವರದಿಗಾರ ಸಂಶುದ್ದೀನ್ ಸಂಪ್ಯ ಸ್ಪರ್ಧಿಸಿದ್ದು ಸಂಶುದ್ದೀನ್ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಯ 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸುದ್ದಿ ಬಿಡುಗಡೆ ಸ್ಥಾನೀಯ ಸಂಪಾದಕ ಕರುಣಾಕರ ರೈ ಸಿ.ಎಚ್., ಸುದ್ದಿ ಬಿಡುಗಡೆ ವರದಿಗಾರ ಶೇಷಪ್ಪ ಕಜೆಮಾರ್, ಸಂಯುಕ್ತ ಕರ್ನಾಟಕ ವರದಿಗಾರ ಮೇಘ ಪಾಲೆತ್ತಡಿ, ವಿಜಯ ಕರ್ನಾಟಕದ ವರದಿಗಾರರಾದ ಸುಧಾಕರ್ ಸುವರ್ಣ ತಿಂಗಳಾಡಿ, ಕುಮಾರ್ ಕಲ್ಲಾರೆ, ಹೊಸದಿಗಂತ ವರದಿಗಾರ ಐ.ಬಿ.ಸಂದೀಪ್ ಕುಮಾರ್, ಸ್ಪಂದನ ಟಿ.ವಿ.ಯ ಉಮಾಶಂಕರ್ ಪಾಂಗ್ಲಾಯಿ ಮತ್ತು ವಿಶ್ವವಾಣಿಯ ಕೃಷ್ಣಪ್ರಸಾದ್ ಬಲ್ನಾಡು ಆಯ್ಕೆಯಾಗಿದ್ದಾರೆ. ಸುದ್ದಿ ಬಿಡುಗಡೆ ವರದಿಗಾರ ಉಮಾಪ್ರಸಾದ್ ರೈ ಮತ್ತು ವಿಶ್ವವಾಣಿಯ ಪ್ರವೀಣ್ ಕುಮಾರ್ ಬೊಳುವಾರು ಪರಾಭವಗೊಂಡಿದ್ದಾರೆ. ಒಟ್ಟು 23 ಮಂದಿ ಮತದಾರರಾಗಿದ್ದು ಎಲ್ಲರೂ ಮತಚಲಾಯಿಸಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ ಚುನಾವಣಾಧಿಕಾರಿಯಾಗಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಉಪ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಚುನಾವಣಾ ಮೇಲುಸ್ತುವಾರಿಯಾಗಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ರವಿಕುಮಾರ್ ಆಗಮಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದ.ಕ.ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ್ದರು.