ಮಾಡಾವು ಗೌರಿ ಹೊಳೆಯ ಕಿಂಡಿ ಅಣೆಕಟ್ಟಿನಲ್ಲಿ ಮುಳುಗಿ ವ್ಯಕ್ತಿ ಮೃತ್ಯು

0

ಪುತ್ತೂರು: ಮಾಡಾವು ಬೊಳಿಕ್ಕಳ ಗೌರಿ ಹೊಳೆಯ ಕಿಂಡಿ ಅಣೆಕಟ್ಟಿನಲ್ಲಿ ವ್ಯಕ್ತಿಯೊಬ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಡಿ.೫ ರಂದು ನಡೆದಿದೆ.


ಮೂಲತಃ ಉಪ್ಪಿನಂಗಡಿ ನಿವಾಸಿಯಾಗಿದ್ದು, ಮಾಡಾವು ಬೊಳಿಕ್ಕಳದಲ್ಲಿ ಸಂಬಂಧಿಕರ ಮನೆಯಲ್ಲಿರುವ ಹರೀಶ್ಚಂದ್ರ(45ವ) ರವರು ಮೃತಪಟ್ಟವರು. ಹರೀಶ್ಚಂದ್ರ ಸಹಿತ ನಾಲ್ವರು ಸಂಜೆ ಬೊಳಿಕ್ಕಳ ಕಿಂಡಿಅಣೆಕಟ್ಟಿನಲ್ಲಿ ಶೇಖರಣೆಗೊಂಡ ನೀರಿನಲ್ಲಿ ಸ್ನಾನಕ್ಕೆ ಹೋಗಿದ್ದರೆನ್ನಲಾಗಿದೆ. ಈ ವೇಳೆ ಹರೀಶ್ಚಂದ್ರ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸಂಪ್ಯ ಎಸ್ ಐ ರಾಮಕೃಷ್ಣ ಸಹಿತ ಸಿಬ್ಬಂದಿಗಳು ತೆರಳಿದ್ದಾರೆ.

LEAVE A REPLY

Please enter your comment!
Please enter your name here