ಪುತ್ತೂರು: ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು ಮತ್ತು ವಕೀಲರ ಸಂಘ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ , “ಸಂವಿಧಾನ ದಿನಾಚರಣೆ” ಯ ಅಂಗವಾಗಿ ಕಾನೂನು ಮಾಹಿತಿ ಕಾರ್ಯಾಗಾರವು ಡಿ. 1ರಂದು, ವಿವೇಕಾನಂದ ಸಿ. ಬಿ. ಎಸ್. ಇ. ಶಾಲೆಯಲ್ಲಿ ನಡೆಯಿತು.
ಗೌರವಾನ್ವಿತ ಪ್ರಧಾನ ವ್ಯಾವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಅರ್ಚನಾ ಕೆ. ಉಣ್ಣಿತಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂವಿಧಾನದ ಬಗೆಗಿನ ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ. ವಿ ವಹಿಸಿ, ಸಂವಿಧಾನದ ಮಹತ್ವವನ್ನು ತಿಳಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷೆ ವಸಂತಿ ಕೆ. ಅವರು ಉಪಸ್ಥಿತರಿದ್ದು, ಮಕ್ಕಳ ಸುರಕ್ಷತೆ ಮತ್ತು ಜಾಗೃತಿಯ ಕುರಿತು ಮಾಹಿತಿ ನೀಡಿದರು. ಪ್ಯಾನಲ್ ವಕೀಲೆ ಹೀರಾ ಉದಯ್ ಅವರು ಈ ಕಾರ್ಯಕ್ರಮವನ್ನು ಸಂಯೋಜಿಸಿ, ಫೋಕ್ಸೋ ಕಾಯಿದೆ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯೆ ಶಂಕರಿ ಶರ್ಮ ಪಾಲ್ಗೊಂಡಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿಸಿಂಧೂ ವಿ. ಜಿ ಯವರ ಮಾರ್ಗದರ್ಶನ ಹಾಗೂ ಶಾಲಾ ಶಿಕ್ಷಕ ಶಿಕ್ಷಕೇತರ ವೃಂದದವರ ಸಹಕಾರದಿಂದ ಕಾರ್ಯಾಗಾರವು ಸಂಪನ್ನಗೊಂಡಿತು.