ರಾಮಕುಂಜ ದೇವಸ್ಥಾನದಲ್ಲಿ ರಥಕ್ಕೆ ಸ್ಟೇರಿಂಗ್ ಅಳವಡಿಕೆ, ಪರಿವಾರ ದೈವಗಳಿಗೆ ಬೆಳ್ಳಿಯ ಆಭರಣ ಸಮರ್ಪಣೆ ಮನವಿಪತ್ರ, ಕೂಪನ್ ಬಿಡುಗಡೆ

0

ರಾಮಕುಂಜ: ಕಡಬ ತಾಲೂಕಿನ ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಶ್ರೀ ದೇವರ ಬ್ರಹ್ಮರಥಕ್ಕೆ ಸ್ಟೇರಿಂಗ್ ಅಳವಡಿಕೆ ಹಾಗೂ ಕ್ಷೇತ್ರದ ಪರಿವಾರ ದೈವಗಳಿಗೆ ಬೆಳ್ಳಿಯ ಆಭರಣ ಸಮರ್ಪಣೆಗೆ ಸಂಬಂಧಿಸಿದ ಮನವಿಪತ್ರ ಹಾಗೂ ಕೂಪನ್ ಬಿಡುಗಡೆ ಡಿ.5ರಂದು ದೇವಸ್ಥಾನದಲ್ಲಿ ನಡೆಯಿತು.

ಖ್ಯಾತ ದೈವಜ್ಞರಾದ ಇಜ್ಜಾವು ಮಾಧವ ಆಚಾರ್‌ರವರ ಮಾರ್ಗದರ್ಶನದಂತೆ ಸ್ಟೇರಿಂಗ್ ಅಳವಡಿಕೆ ಮುಹೂರ್ತ, ಪರಿವಾರ ದೈವಗಳಿಗೆ ಬೆಳ್ಳಿಯ ಆಭರಣ ಸಮರ್ಪಣೆಯ ಮನವಿ ಪತ್ರ, ಕೂಪನ್ ಬಿಡುಗಡೆ ಮಾಡಲಾಯಿತು. ಇದಕ್ಕೂ ಮೊದಲು ದೈವಗಳ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವಸ್ಥಾನದ ಪವಿತ್ರಪಾಣಿ ನರಹರಿ ಉಪಾಧ್ಯಾಯ ಈರಕಿ ಮಠ, ಕೃಷ್ಣಮೂರ್ತಿ ಕಲ್ಲೇರಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಸದಸ್ಯರಾದ ಗಿರಿಯಪ್ಪ ಗೌಡ ಆನ, ಸಂಜೀವ ಶಾರದಾನಗರ, ಯೋಗೀಶ್ ಅಜ್ಜಿಕುಮೇರು, ಜನಾರ್ದನ ಬಾಂತೊಟ್ಟು, ವಿಮಲಕರುಣಾಕರ, ನಿವೃತ್ತ ಪ್ರಾಂಶುಪಾಲ ಸತೀಶ್ ಭಟ್, ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಪ್ರಶಾಂತ ಆರ್.ಕೆ., ಸದಸ್ಯ ಸೂರಪ್ಪಕುಲಾಲ್, ಮಾಜಿ ಅಧ್ಯಕ್ಷ ಶೇಖರ ಗೌಡ ಹಿರಿಂಜ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕಜೆ, ಸ್ಥಳೀಯ ಮುಖಂಡರಾದ ದಿವಾಕರ ರಾವ್ ಪಂಚವಟಿ, ಲಕ್ಷ್ಮೀನಾರಾಯಣ ರಾವ್ ಆತೂರು, ಸದಾಶಿವ ಶೆಟ್ಟಿ ಮಾರಂಗ, ಕೃಷ್ಣಮೂರ್ತಿ ಕೆರೆಕರೆ, ತಿಮ್ಮಪ್ಪ ಗೌಡ ಆನ, ಶೇಖರ ಆನ, ಅಶೋಕ್‌ಕುಮಾರ್ ಶಾರದಾನಗರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಅರ್ಚಕ ಶ್ರೀನಿಧಿ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು.

LEAVE A REPLY

Please enter your comment!
Please enter your name here