




ಪುತ್ತೂರು: ಕಡಬ ತಾಲೂಕಿನ ಕಾಯಿಮಣ ಗ್ರಾಮದ ಆದಿಮನೆ ಕಳುವಾಜೆ ಇಲ್ಲಿ ಶ್ರೀ ಚಾಮುಂಡಿ ದೈವ ಕಳುವಾಜೆ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠಾ ಕಲಶಾಭಿಷೇಕೋತ್ಸವ ಮತ್ತು ನೇಮೋತ್ಸವವು ಡಿ.7 ರಂದು ಆರಂಭಗೊಂಡಿತು.









ಸಂಜೆ ತಂತ್ರಿಗಳ ಆಗಮನ ಹಾಗೂ ಸ್ವಾಗತ, ಬಳಿಕ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ತಿಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ಅಘೋರಹೋಮ, ಪ್ರೇತಾವಾಹನೆ, ಉಚ್ಛಾಟನೆ, ರಕ್ಷೋಘ್ನಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ, ದುರ್ಗಾ ನಮಸ್ಕಾರ ಪೂಜೆ ಮತ್ತು ಪ್ರಸಾದ ವಿತರಣೆ ಜರಗಿತು. ಧಾರ್ಮಿಕ ಕಾರ್ಯಕ್ರಮವು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಜರಗಿತು. ಕಳುವಾಜೆ ಕುಟುಂಬದ ಹಿರಿಯರಾದ ಜಿನ್ನಪ್ಪ ಗೌಡ ಕಳುವಾಜೆರವರ ಮುಂದಾಳತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಕಳುವಾಜೆ ಕುಟುಂಬಸ್ಥರ ಸಹಿತ ನೂರಾರು ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.










