ಪುತ್ತೂರು: ಕುಂಬಳೆ ಸೀಮೆಗೆ ಸೇರಿಗೆ ದೇಲಂಪಾಡಿ ಉಜಂಪಾಡಿ ಗುತ್ತು ತರವಾಡಿನಲ್ಲಿ ವಾರ್ಷಿಕ ದೈವಗಳ ನೇಮೋತ್ಸವವು ವೈಭವದಿಂದ ಸಂಪನ್ನಗೊಂಡಿತು. ಪ್ರಾರಂಭದಲ್ಲಿ ಗುತ್ತು ತರವಾಡು ಮನೆಯಲ್ಲಿ ಗಣಹೋಮ, ದೇವತಾ ಪ್ರಾರ್ಥನೆ ನಡೆಯಿತು. ಸಂಜೆ ಮುಗೇರು ಕಾಪಾಡಿ ತರವಾಡು ಮನೆಯಿಂದ ದೈವಗಳ ಭಂಡಾರ ತೆಗೆದು ಉಜಂಪಾಡಿಗುತ್ತು ತರವಾಡಿನಲ್ಲಿ ಉಳ್ಳಾಕುಲು ಹಾಗೂ ದೂಮಾವತಿ ಪರಿವಾರ ದೈವಗಳ ನೇಮ ನಡೆಯಿತು.
ಮಣಿಯೂರು ಶ್ರೀಶಾಸ್ತಾರ ಕ್ಷೇತ್ರದ ಪವಿತ್ರಪಾಣಿ ಮುಗೇರು ಗೋಪಾಲ ರಾವ್, ಧಾರ್ಮಿಕ ಮುಂದಾಳು ಬೆಳ್ಳಿಪ್ಪಾಡಿ ಸದಾಶಿವ ರೈ, ತರವಾಡು ಮನೆಯ ಯಜಮಾನ ಚಿಕ್ಕಪ್ಪ ನಾಯಕ್, ಶಾಂತಿಮಲೆ ಜಗನ್ನಾಥ ರೈ ಉಪಸ್ಥಿತರಿದ್ದರು.
ಕರ್ನೂರು ಗುತ್ತು ರಾಮರತನ್ ನಾಯಕ್, ಉಜಂಪಾಡಿ ವಿಶ್ವನಾಥ ರೈ, ಬಿ,ಬಾಲಕರಷ್ಣ ಗೌಡ ದೇಲಂಪಾಡಿ, ಲಂಬೋಧರ ಶೆಟ್ಟಿ ಮಣಿಯೂರು, ವಾಲ್ತಾಜೆ ದುಗ್ಗಪ್ಪ ಗೌಡ, ವಾಲ್ತಾಜೆ ನಾರಾಯಣ ಗೌಡ, ದೇಲಂಪಾಡಿ ರಮಾನಂದ ರೈ, ಕಲ್ಲಡ್ಕ ರಾಮಯ್ಯ ರೈ, ಮಣಿಯೂರು ವಿಶ್ವನಾಥ ರೈ, ಶಾಂತಿಮೂಲೆ ರಘುನಾಥ ರೈ, ಉಜಂಪಾಡಿ ಗೋಪಾಲ ಮಣಿಯಾಣಿ ಮೊದಲಾದವರು ನೇಮೋತ್ಸವ ಉಸ್ತವಾರಿ ವಹಿಸಿದ್ದರು.