ರೋಟರಿ ಪುತ್ತೂರು ಸಿಟಿಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ರೋಟರಿಯ ದೇಣಿಗೆ ತಲುಪುತ್ತದೆ-ಪ್ರಕಾಶ್ ಕಾರಂತ್

ಪುತ್ತೂರು: ವಿಶ್ವದಲ್ಲಿ ರೋಟರಿ ಸದಸ್ಯರು ರೋಟರಿ ಧತ್ತಿನಿಧಿಗೆ ಸಮರ್ಪಿಸುವ ದೇಣಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಉತ್ತುಂಗಕ್ಕೆ ಕಾರಣವಾಗಬಲ್ಲುದು ಮಾತ್ರವಲ್ಲದೆ ದೇಶ ಅಭಿವೃದ್ಧಿಯ ನಿಟ್ಟಿನಲ್ಲಿ ಬಹಳ ಸಹಕಾರಿಯಾಗುತ್ತದೆ. ಸಮಾಜದ ಒಳಿತಿಗಾಗಿ ನಮ್ಮಲ್ಲಿ ವಿಶಾಲವಾದ ಹೃದಯದ ತುಡಿತವಿದ್ದಾಗ ಖಂಡಿತಾ ಆನಂದಭಾಷ್ಪ ಸುರಿಯುತ್ತದೆ ಎಂದು ರೋಟರಿ ಜಿಲ್ಲೆ, ವಲಯ ನಾಲ್ಕರ ಜಿಲ್ಲಾ ಗವರ್ನರ್ ಮೇಜರ್ ಡೋನರ್ ಪ್ರಕಾಶ್ ಕಾರಂತ್ ರವರು ಹೇಳಿದರು.


ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ನಾಲ್ಕರ ರೋಟರಿ ಕ್ಲಬ್ ಪುತ್ತೂರು ಸಿಟಿಗೆ ದ.೧೩ ರಂದು ರೋಟರಿ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಸಂದರ್ಭದಲ್ಲಿ ರೋಟರಿ ಮನೀಷಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ರೋಟರಿ ಸಿಟಿಯ ವಿವಿಧ ಸಮಾಜಮುಖಿ ಕಾರ್ಯಗಳನ್ನು ಉದ್ಘಾಟಿಸಿ ಮಾತನಾಡಿದರು.

ರೋಟರಿ ಧತ್ತಿನಿಧಿಗೆ ರೊಟೇರಿಯನ್ಸ್‌ಗಳು ನೀಡುವ ದೇಣಿಗೆ ಖಂಡಿತಾ ವಿಶ್ವದ ಯಾವುದಾದರೊಂದು ಫಲಾನುಭವಿಗೆ ತಲುಪುತ್ತದೆ. ಇದಕ್ಕೆ ತಾಜಾ ಉದಾಹರಣೆ ರೋಟರಿಯಿಂದ ಪೋಲಿಯೊ ನಿರ್ಮೂಲನೆ. ಜಗತ್ತಿನಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಒಂದೆರೆಡು ಕೇಸು ಬಿಟ್ಟರೆ ಬಹುತೇಕ ಪೋಲಿಯೋ ನಿರ್ಮೂಲನೆ ರೋಟರಿಯಿಂದ ಆಗಿದೆ. ನಾವು ಯಾವಾಗ ಸುಪ್ತ ಮನಸ್ಸಿನಿಂದ ಸಮಾಜದ ಏಳಿಗೆಗಾಗಿ ಸ್ಪಂದಿಸುತ್ತೇವೆಯೋ ಆವಾಗ ದೇವರು ನಮಗೆ ಖಂಡಿತಾ ಆಶೀರ್ವದಿಸಿ ಕಾಯುತ್ತಾನೆ. ನಾವು ಮಾಡುವ ಸಮಾಜಮುಖಿ ಕೆಲಸ ಕಾರ್ಯಗಳು ಬೆಳಕಿಗೆ ಬರಬೇಕು, ಕತ್ತಲಿಗೆ ಸೇರಬಾರದು. ಆದ್ದರಿಂದ ರೊಟೇರಿಯನ್ಸ್‌ಗಳಾದ ನಾವು ಸಮಾಜದಲ್ಲಿ ಯಾವ ರೀತಿಯ ಸೇವೆ ಸಲ್ಲಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದರು.


ಕ್ಲಬ್ ಉತ್ತುಂಗಕ್ಕೆ ಕ್ಲಬ್‌ನಲ್ಲಿನ ಸದಸ್ಯರ ಒಗ್ಗಟ್ಟು ಕಾರಣ-ಮಂಜುನಾಥ್ ಆಚಾರ್ಯ:
ರೋಟರಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ್ ಆಚಾರ್ಯರವರು ಕ್ಲಬ್‌ನ ಬುಲೆಟಿನ್ ರೋಟವಿಕಾಸವನ್ನು ಬಿಡುಗಡೆಗೊಳಿಸಿ ಮಾತನಾಡಿ, ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರ ನೇತೃತ್ವದಲ್ಲಿ ಜಿಲ್ಲಾ ಯೋಜನೆಗಳಾದ ವನ ಸಿರಿ, ಜಲ ಸಿರಿ, ಆರೋಗ್ಯ ಸಿರಿ, ವಿದ್ಯಾಸಿರಿ ಯೋಜನೆಗಳು ಪ್ರತಿ ಕ್ಲಬ್ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ರೋಟರಿ ಸಿಟಿಯು ಸದಸ್ಯತನ ಹೆಚ್ಚಳ, ಸಮಾಜಮುಖಿ ಪ್ರಾಜೆಕ್ಟ್‌ಗಳು, ಫಂಡ್ ರೈಸಿಂಗ್ ಮುಂತಾದ ಕಾರ್ಯಕ್ರಮಗಳಿಗೆ ಹೆಚ್ಚಿನ ಕಾಳಜಿ ವಹಿಸುತ್ತಿದೆ. ರೋಟರಿ ಸಿಟಿಯ ಅಧ್ಯಕ್ಷ ಪ್ರಶಾಂತ್ ಶೆಣೈಯವರಲ್ಲಿ ನಿಜಕ್ಕೂ ನಾಯಕತ್ವದ ಗುಣವಿದೆ ಎಂಬುದಕ್ಕೆ ಕ್ಲಬ್‌ನಲ್ಲಿನ ಸದಸ್ಯರ ಒಗ್ಗಟ್ಟೇ ಪ್ರಮುಖ ಕಾರಣವಾಗಿದೆ ಎಂದರು.


ಕ್ಲಬ್‌ನಿಂದ ಹೊಸ ಮುಖಗಳು ಜಿಲ್ಲೆಯಲ್ಲಿ ಹೆಸರು ಗಳಿಸಲಿ-ಪ್ರಮೋದ್ ಮಲ್ಲಾರ:
ರೋಟರಿ ವಲಯ ಸೇನಾನಿ ಪ್ರಮೋದ್ ಮಲ್ಲಾರ ಮಾತನಾಡಿ, ಕಳೆದ ವರ್ಷ ತಾನು ಅಧ್ಯಕ್ಷನಾಗಿದ್ದಾಗ ಕ್ಲಬ್‌ನ ಸರ್ವ ಸದಸ್ಯರ ಸಂಪೂರ್ಣ ಸಹಕಾರದಿಂದ ಜಿಲ್ಲೆಯಲ್ಲಿಯೇ ಫ್ಲಾಟಿನಂ ಫ್ಲಸ್ ಎಂಬ ಗೌರವಕ್ಕೆ ಪ್ರಾಪ್ತವಾಗಿದೆ. ಪ್ರಸ್ತುತ ಅಧ್ಯಕ್ಷರಾಗಿರುವ ಪ್ರಶಾಂತ್ ಶೆಣೈಯವರ ನೇತೃತ್ವದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿದ್ದು, ಕ್ಲಬ್ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಹಂತಕ್ಕೇರಲಿ ಜೊತೆಗೆ ಕ್ಲಬ್‌ನಿಂದ ಅನೇಕ ಹೊಸ ಮುಖಗಳು ಜಿಲ್ಲೆಯಲ್ಲಿ ಹೆಸರು ಗಳಿಸಲಿ ಎಂದರು.

ಪಿಎಚ್‌ಎಫ್ ಗೌರವ:
ಅಂತರ್ರಾಷ್ಟ್ರೀಯ ರೋಟರಿ ಫೌಂಡೇಶನ್‌ಗೆ ಟಿಆರ್‌ಎಫ್ ದೇಣಿಗೆ ನೀಡಿ ಗೌರವಾನ್ವಿತ ಪಿಎಚ್‌ಎಫ್ ಪದವಿಯೊಂದಿಗೆ ಮೇಜರ್ ಡೋನರ್ ಎನಿಸಿ ಡಾ.ಹರಿಕೃಷ್ಣ ಪಾಣಾಜೆ(ಪಿಎಚ್‌ಎಫ್+2 ಲೆವೆಲ್), ಕಾರ್ಯದರ್ಶಿ ಜಯಗುರು ಆಚಾರ್(ಪಿಎಚ್‌ಎಫ್+1 ಲೆವೆಲ್), ಅಧ್ಯಕ್ಷ ಪ್ರಶಾಂತ್ ಶೆಣೈ(ಪಿಎಚ್‌ಎಫ್+2 ಲೆವೆಲ್), ಭವಿನ್ ಸಾವ್‌ಜಾನಿ(ಪಿಎಚ್‌ಎಫ್+1 ಲೆವೆಲ್), ಲಕ್ಷ್ಮೀಕಾಂತ್ ಆಚಾರ್ಯ, ಕೃಷ್ಣವೇಣಿ ಮುಳಿಯ, ಜಿಗ್ನೇಶ್ ಸಾವ್‌ಜಾನಿ, ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್, ಕಿರಣ್ ಬಿ.ವಿ, ಜಬ್ಬಾರ್ ಕೆ.ಎಂ, ಆನಂದ ಭಟ್‌, ಡಾ. ಅಜಿತ್‌ ಹೆಗ್ಡೆ ಮಹೇಶ್ ಕಜೆರವರನ್ನು ಪ್ರಮಾಣಪತ್ರ ಹಾಗೂ ಕಳೆದ ವರ್ಷ ಪಿಎಚ್‌ಎಫ್ ದೇಣಿಗೆ ನೀಡಿದ ಮನೋಹರ್ ಕೆ(ಫ್ಲಸ್ 1), ರಾಜೇಶ್ ಯು.ಪಿ, ಮೋಹನ್ ಕೆ, ನಿಯೋಜಿತ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್, ನಿವೃತ್ತ ಆರ್‌ಟಿಒ ಆನಂದ ಗೌಡ, ಜಯಗುರು ಆಚಾರ್, ಮೊಹಮದ್ ಸಾದಿಕ್‌ರವರಿಗೆ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ರೋಟರಿ ಪಿನ್ ತೊಡಿಸಿ ಗೌರವಿಸಿದರು. ಅಲ್ಲದೆ ರೋಟರಿ ಸದಸ್ಯರಿಂದ ಸಂಗ್ರಹಿಸಿದ ರೂ.6 ಸಾವಿರ ಡಾಲರ್ ಮೊತ್ತದ ಪಿಎಚ್‌ಎಫ್/ಟಿಆರ್‌ಎಫ್(ಕ್ಲಬ್‌ನಿಂದ 100% ಟಿಆರ್‌ಎಫ್) ಚೆಕ್ ಅನ್ನು ಟಿಆರ್‌ಎಫ್ ಛೇರ್‌ಮ್ಯಾನ್ ಡಾ.ಹರಿಕೃಷ್ಣ ಪಾಣಾಜೆರವರು ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರಿಗೆ ಹಸ್ತಾಂತರಿಸಿದರು. ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ದಯಾನಂದ ಕೆ.ಎಸ್ ಕಾರ್ಯಕ್ರಮ ನಿರ್ವಹಿಸಿದರು.


ಸನ್ಮಾನ/ಗೌರವ:
ದಿ.ಕುಡ್ಗಿ ಶ್ರೀಮತಿ ಅನಸೂಯ ಹಾಗೂ ದಿ.ಕುಡ್ಗಿ ವೆಂಕಟೇಶ್ ಶೆಣೈರವರ ಸ್ಮರಣಾರ್ಥ ಅವರ ಮಕ್ಕಳಾದ ಕುಡ್ಗಿ ಸುಧಾಕರ್ ಶೆಣೈ, ರತ್ನಾಕರ್ ಶೆಣೈ, ವೆಂಕಟೇಶ್ ಶೆಣೈ, ವಿಶ್ವಾಸ್ ಶೆಣೈರವರ ಪ್ರಾಯೋಜಕತ್ವದಲ್ಲಿ ಮಿತ್ತೂರು ಸರಕಾರಿ ಶಾಲೆಗೆ ರೂ.1.80 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ರಂಗಮಂದಿರಕ್ಕೆ ರೋಟರಿ ಭೀಷ್ಮ ಕೆ.ಆರ್ ಶೆಣೈಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು

. ಅಳಕೆಮಜಲು ಸರಕಾರಿ ಶಾಲೆಗೆ ಪೈಂಟಿಂಗ್‌ಗೆ ರೂ.10 ಸಾವಿರ ನೀಡಿದ ಅಧ್ಯಕ್ಷ ಪ್ರಶಾಂತ್ ಶೆಣೈ, ರೂ.6 ಸಾವಿರ ವೆಚ್ಚದ ಚೇಯರ್ ನೀಡಿದ ಸುಧಾಕರ್ ಶೆಟ್ಟಿ, ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೂ.5 ಸಾವಿರ ಮೊತ್ತದ ಚೇಉರ್ ನೀಡಿದ ಜೋನ್ ಕುಟಿನ್ಹಾ, ಪಬ್ಲಿಕ್ ಇಮೇಜ್‌ಗಾಗಿ ಮಾರುತಿ ಓಮ್ನಿ ವ್ಯಾನ್ ನೀಡಿದ ನಿಕಟಪೂರ್ವ ಅಸಿಸ್ಟೆಂಟ್ ಗವರ್ನರ್ ಸುರೇಂದ್ರ ಕಿಣಿ, ಕೊಂಬೆಟ್ಟು ಜ್ಯೂನಿಯರ್ ಕಾಲೇಜ್‌ಗೆ ರೂ.30 ಸಾವಿರ ಮೌಲ್ಯದ ಸ್ಯಾನಿಟರಿ ನ್ಯಾಪ್ಕಿನ್ ಬರ್ನರ್ ನೀಡಿದ ಸತೀಶ್ ಹಾಗೂ ಹರಿಣಿ ಸತೀಶ್ ದಂಪತಿ, ಕೇವಲ 15 ದಿನಗಳಲ್ಲಿ ಸುಂದರ ವೇದಿಕೆಯನ್ನು ನಿರ್ಮಿಸಿ ಕೊಟ್ಟ ಇಜಾಝ್ ಅಹ್ಮದ್ ಇವರುಗಳನ್ನು ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಶಾಲು ಹೊದಿಸಿ ಗೌರವಿಸಿದರು. ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ರಾಮಚಂದ್ರ ಪುಚ್ಚೇರಿರವರು ಕಾರ್ಯಕ್ರಮ ನಿರ್ವಹಿಸಿದರು.


ನೂತನ ಸದಸ್ಯ ಸೇರ್ಪಡೆ:
ಕ್ಲಬ್ ಸರ್ವಿಸ್ ವತಿಯಿಂದ ಪುತ್ತೂರು ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ, ಇನ್ಸೂರೆನ್ಸ್ ಸಲಹೆಗಾರ, ಪಿಗ್ಮಿ ಸಂಗ್ರಾಹಕರಾದ ನೆಲ್ಲಿಕಟ್ಟೆ ನಿವಾಸಿ ಉಲ್ಲಾಸ್ ಪೈಯವರನ್ನು ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಬರಮಾಡಿಕೊಂಡರು. ಕ್ಲಬ್ ಸರ್ವಿಸ್ ನಿರ್ದೇಶಕ ಆನಂದ ಗೌಡರವರು ಕಾರ್ಯಕ್ರಮ ನಿರ್ವಹಿಸಿದರು.


ಅಭಿನಂದನೆ:
ಇತ್ತೀಚೆಗೆ ವೈವಾಹಿಕ ಜೀವನವನ್ನು ಆಚರಿಸಿದ ಕ್ಲಬ್ ಸದಸ್ಯರಾದ ಡಾ.ಅಜಿತ್ ಹೆಗ್ಡೆ ಹಾಗೂ ಪ್ರತಿಮಾ ಹೆಗ್ಡೆ ದಂಪತಿ, ಮೊಹಮದ್ ಸಾಬ್ ದಂಪತಿ, ಕಾರ್ಯಕ್ರಮದ ಪ್ರಾಯೋಜಕರಾಗಿ ಸಹಕರಿಸಿದ ಕೆ.ಪ್ರಶಾಂತ್ ಶೆಣೈ, ಜಯಗುರು ಆಚಾರ್, ಜೋನ್ ಕುಟಿನ್ಹಾ, ನಟೇಶ್ ಉಡುಪ, ಡಾ.ಶಶಿಧರ್ ಕಜೆ, ಸಾದಿಕ್, ಮಹಾಲಕ್ಷ್ಮೀ, ಹರಿಣಿ ಸತೀಶ್, ಕಿರಣ್ ಬಿ.ವಿ, ಸ್ವಾತಿ ಮಲ್ಲಾರ, ಲಾರೆನ್ಸ್ ಗೊನ್ಸಾಲ್ವಿಸ್, ಸುಧಾಕರ್ ಶೆಟ್ಟಿ, ಭವಿನ್ ಸಾವ್‌ಜಾನಿ, ಮನೋಹರ್, ಡೆನ್ನಿಸ್ ಮಸ್ಕರೇನ್ಹಸ್, ಜಯಕುಮಾರ್ ರೈ ಎಂ.ಆರ್, ಪದ್ಮನಾಭ ಶೆಟ್ಟಿ, ಧರ್ಣಪ್ಪ ಗೌಡ, ಆನಂದ ಗೌಡ, ಉಮೇಶ್ಚಂದ್ರ, ಶ್ರೀಲತಾ ಶೆಣೈ, ರಾಮಚಂದ್ರ ಪುಚ್ಚೇರಿ, ದಯಾನಂದ ಕೆ.ಎಸ್, ಆನಂದ್ ಭಟ್, ರಾಜೇಶ್ ಯು.ಪಿ, ಲೀನಾ ಪಾಯಿಸ್, ಶ್ರೀನಿವಾಸ್ ಕುಮಾರ್, ಮೋಹನ್ ಎಂ, ಸುರೇಂದ್ರ ಕಿಣಿ, ಪುರುಷೋತ್ತಮ್ ಮುಂಗ್ಲಿಮನೆರವರುಗಳನ್ನು ಅಭಿನಂದಿಸಲಾಯಿತು.


ಯೂತ್ ಸರ್ವಿಸ್:
ಯೂತ್ ಸರ್ವಿಸ್ ವತಿಯಿಂದ ವಿವೇಕಾನಂದ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಓದುತ್ತಿರುವ ದಿ.ಪ್ರವೀಣ್ ಕುಮಾರ್‌ರವರ ಪುತ್ರಿ ತೃಷಾ ಬಿ.ರವರಿಗೆ ಕೆ.ಆರ್ ಶೆಣೈಯವರ ಪ್ರಾಯೋಜಕತ್ವದಲ್ಲಿ ರೂ.10 ಸಾವಿರ ಮೊತ್ತವನ್ನು ಹಸ್ತಾಂತರಿಸಲಾಯಿತು. ಪ್ರಸ್ತುತ ವರ್ಷ ಕರ್ನಾಟಕದಿಂದ ರಕ್ಷಣಾ ವಿಭಾಗದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಮತ್ತು ಏಕೈಕ ಆಟಗಾರ ಡಾ.ಅಜಿತ್ ಹೆಗ್ಡೆ ಹಾಗೂ ಪ್ರತಿಮಾ ಹೆಗ್ಡೆ ದಂಪತಿ ಪುತ್ರ ವೈಷ್ಣವ್ ಹೆಗ್ಡೆರವರನ್ನು ಅಭಿನಂದಿಸಲಾಯಿತು. ಯೂತ್ ಸರ್ವಿಸ್ ನಿರ್ದೇಶಕ ಇಜಾಝ್ ಅಹ್ಮದ್ ಕಾರ್ಯಕ್ರಮ ನಿರ್ವಹಿಸಿದರು.


ಅವಾರ್ಡ್ ಗೌರವ:
ಕಳೆದ ವರ್ಷ ಸಾಂಸ್ಕೃತಿಕ, ಕ್ರೀಡೆಯ ಜೊತೆಗೆ ಅತ್ತ್ಯುತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರೆಸಿಡೆನ್ಸಿಯಲ್ ಸೈಟೇಶನ್‌ನಲ್ಲಿ ಕ್ಲಬ್ ಮೂರನೇ ಸ್ಥಾನದ ಗೌರವಕ್ಕೆ ಪಾತ್ರರಾದ ಹಿನ್ನೆಲೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಪ್ರಮೋದ್ ಮಲ್ಲಾರ, ಕಾರ್ಯದರ್ಶಿ ಗುರುರಾಜ್, ಅಸಿಸ್ಟೆಂಟ್ ಗವರ್ನರ್ ಜಿ.ಸುರೇಂದ್ರ ಕಿಣಿರವರಿಗೆ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ಫ್ಲ್ಯಾಗ್ ಅನ್ನು ಹಸ್ತಾಂತರಿಸಿ ಶುಭ ಹಾರೈಸಿದರು.

ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈಯವರ ಪತ್ನಿ ಅಕ್ಷತಾ ಶೆಣೈ, ನಿಯೋಜಿತ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಉಷಾ ಮಣಿ ಪ್ರಾರ್ಥಿಸಿದರು. ಕ್ಲಬ್ ಸದಸ್ಯ ಕೃಷ್ಣಮೋಹನ್ ಪಿ.ಎಸ್‌ರವರು ಸಮರ್ಥ ಅವಾರ್ಡ್ ವಿಜೇತರ ಹಾಗೂ ಮಾಜಿ ಅಧ್ಯಕ್ಷ ಜಯಕುಮಾರ್ ಎಂ.ಆರ್‌ರವರು ಜಿಲ್ಲಾ ಗವರ್ನರ್‌ರವರ ಪರಿಚಯ ಮಾಡಿದರು. ಕ್ಲಬ್ ಸದಸ್ಯರಾದ ಡಾ.ಶಶಿಧರ್ ಕಜೆ, ಪ್ರಕಾಶ್ ಕೆ.ವಿ, ಅಬ್ದುಲ್ ರಹಿಮಾನ್, ಜೋನ್ ಕುಟಿನ್ಹಾ, ಗುರುರಾಜ್, ಸುಧಾಕರ್ ಶೆಟ್ಟಿ, ಜಯಕುಮಾರ್ ರೈ ಎಂ.ಆರ್ ರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಅಧ್ಯಕ್ಷ ಕೆ.ಪ್ರಶಾಂತ್ ಶೆಣೈ ಸ್ವಾಗತಿಸಿ, ಕಾರ್ಯದರ್ಶಿ ಜಯಗುರು ಆಚಾರ್ ವರದಿ ಮಂಡಿಸಿ ವಂದಿಸಿದರು. ನ್ಯಾಯವಾದಿ ಮಹೇಶ್ ಕಜೆ ಕಾರ್ಯಕ್ರಮ ನಿರೂಪಿಸಿದರು.‌

 ರೋಟರಿ `ಸಮರ್ಥ’ ಪ್ರದಾನ…
ರೋಟರಿ ಸಿಟಿ ವರ್ಷಂಪ್ರತಿ ಕೊಡಲ್ಪಡುವ ವೊಕೇಶನಲ್ ಎಕ್ಸೆಲೆನ್ಸ್ `ಸಮರ್ಥ’ ಅವಾರ್ಡ್‌ನ್ನು 2022-23ನೇ ಸಾಲಿನಲ್ಲಿ ಉದ್ಯಮ ಕ್ಷೇತ್ರದಲ್ಲಿ ಮಾಡಿರುವ ಗಣನೀಯ ಸಾಧನೆಗೆ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್‌ರವರು ದಿ.ಎಚ್.ರಾಜಗೋಪಾಲ್ ಆಚಾರ್ ಮತ್ತು ಶ್ರೀಮತಿ ಪಿ.ಸುಮಿತ್ರ ಆಚಾರ್‌ರವರ ಪುತ್ರ, ಸಾಂದೀಪನಿ ವಿದ್ಯಾಸಂಸ್ಥೆಯ ಸಂಚಾಲಕರಾದ ಭಾಸ್ಕರ ಆಚಾರ್ ಹಿಂದಾರುರವರಿಗೆ ಪ್ರದಾನ ಮಾಡಿದರು. ವೃತ್ತಿ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದು, ತಮ್ಮ ವೃತ್ತಿಯೊಂದಿಗೆ ಅನನ್ಯವಾದ ಅನುಕರಣೀಯ ಸಮಾಜಮುಖಿ ಕಾರ್ಯಗಳನ್ನು ಮಾಡಿದ ರೋಟರಿ ಸದಸ್ಯರಲ್ಲದ ವ್ಯಕ್ತಿಗೆ ಕಳೆದ 11 ವರ್ಷಗಳಿಂದ ರೋಟರಿ ಸಿಟಿಯು ಈ ಅವಾರ್ಡ್‌ನ್ನು ನೀಡುತ್ತಾ ಬಂದಿದೆ. ಸನ್ಮಾನ ಸಂದರ್ಭದಲ್ಲಿ ಭಾಸ್ಕರ ಆಚಾರ್ ಹಿಂದಾರುರವರ ಪತ್ನಿ ಸುಜಾತ ಆಚಾರ್ ಉಪಸ್ಥಿತರಿದ್ದರು.

ಭೇಟಿ ಕಾರ್ಯಕ್ರಮಗಳು…
*ಮಿತ್ತೂರು ಶಾಲೆಯಲ್ಲಿ ರೂ.1.80 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ನೂತನ ರಂಗಮಂದಿರದ ಉದ್ಘಾಟನೆ

*ಓಜಾಳ ಸರಕಾರಿ ಶಾಲೆಗೆ ರೂ1.25 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮಕ್ಕಳ ಉದ್ಯಾನವನ ಉದ್ಘಾಟನೆ

*ಅಳಕೆಮಜಲು ಸರಕಾರಿ ಶಾಲೆಗೆ ಕ್ಲಬ್ ವತಿಯಿಂದ ಶಾಲೆಗೆ ಬಳಿಯಲಾದ ಪೇಂಟಿಂಗ್ ವೀಕ್ಷಣೆ

*ರಾಮಕೃಷ್ಣ ಸೇವಾ ಆಶ್ರಮದಲ್ಲಿ ಪ್ರಭಾಕರ್ ಶೆಣೈಯವರ ಪ್ರಾಯೋಜಕತ್ವದಲ್ಲಿ ರೂ.50 ಸಾವಿರ ವೆಚ್ಚದಲ್ಲಿ ಆಶ್ರಮವಾಸಿಗಳಿಗೆ ಸಮವಸ್ತ್ರದ ಪ್ರಾಜೆಕ್ಟ್ ಕೊಡುಗೆಯ ಹಸ್ತಾಂತರ

ಸದಸ್ಯರ ಅಭೂತಪೂರ್ವ ಸಹಕಾರ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ…
ರೋಟರಿ ಕ್ಲಬ್ ಸಿಟಿಯ ಚಾರ್ಟರ್ ಸದಸ್ಯನಾದರೂ 20ನೇ ಅಧ್ಯಕ್ಷನಾಗುವ ಭಾಗ್ಯ ನನಗೆ ಒಲಿದು ಬಂತು. ಮನಸ್ಸಿನ ಒಂದು ಮೂಲೆಯಲ್ಲಿ ತಳಮಳ, ಉದ್ವೇಗ, ಭಯ ಎಲ್ಲವೂ ನನ್ನಲ್ಲಿತ್ತು. ನಮ್ಮ ಇಡೀ ಸಂಸಾರ ರೋಟರಿಯಲ್ಲಿ ಸೇವೆ ಮಾಡಿದವರೇ. ಆದರೂ ಧೈರ್ಯದಿಂದ ಈ ಜವಾಬ್ದಾರಿಯನ್ನು ವಹಿಸಿಕೊಂಡು ಸಂಸ್ಥೆಗೆ ಯಾವುದೇ ಧಕ್ಕೆ ಆಗದಂತೆ ಅರ್ಧ ದಾರಿಯನ್ನು ಸವೆಸಿದ್ದೇನೆ. ಕ್ಲಬ್ ನನ್ನ ಮೇಲಿಟ್ಟಿರುವ ವಿಶ್ವಾಸವನ್ನು ನನ್ನ ಕುಟುಂಬದ ಸಹಕಾರದೊಂದಿಗೆ ಮುನ್ನೆಡೆಸುತ್ತಿದ್ದೇನೆ ಎಂಬ ತೃಪ್ತ ಭಾವನೆಯಿದೆ. ಕ್ಲಬ್‌ನ ಶಕ್ತಿ ಮತ್ತು ಸಾಮರ್ಥ್ಯ ಸದಸ್ಯರ ಸಹಕಾರದ ಮೇಲೆ ನಿಂತಿದೆ. ನನ್ನ ಈ ಕೆಲಸಕ್ಕೆ ಕ್ಲಬ್ ಸದಸ್ಯರಲ್ಲಿನ ಅಭೂತಪೂರ್ವ ಸಹಕಾರ ನನ್ನ ವಿಶ್ವಾಸವನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ. ಮುಂದಿನ ಆರು ತಿಂಗಳಿನಲ್ಲಿ ಸರ್ವ ಸದಸ್ಯರ ನಿರಂತರ ನನ್ನ ಮೇಲಿರಲಿ.
-ಕೆ.ಪ್ರಶಾಂತ್ ಶೆಣೈ, ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಸಿಟಿ

LEAVE A REPLY

Please enter your comment!
Please enter your name here