ನಿಡ್ಪಳ್ಳಿ; ಆರೋಗ್ಯ ಅಮೃತ ಅಭಿಯಾನದ ನಿಡ್ಪಳ್ಳಿ ಗ್ರಾಮ ಮಟ್ಟದ ಸಮಿತಿ ಸಭೆ ಡಿ. 12 ರಂದು ಸಮಿತಿ ಅಧ್ಯಕ್ಷೆ ಗೀತಾ.ಡಿ ಇವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಅಭಿಯಾನದ ತಾಲೂಕು ಸಂಯೋಜಕಿ ಅಶ್ವಿನಿ.ಎಂ ಆರೋಗ್ಯ ಅಮೃತ ಅಭಿಯಾನದ ಬಗ್ಗೆ ಮಾಹಿತಿ ನೀಡಿ ಮಾತನಾಡಿ ಗ್ರಾಮ ಮಟ್ಟದ ಸಮಿತಿಗೆ ಜಿಲ್ಲಾ ಪಂಚಾಯತ್ ನಿಂದ ನೀಡುವ ಕಿಟ್ ನಲ್ಲಿ ಪಲ್ಸ್ ಆಕ್ಸಿಮೀಟರ್, ಡಿಜಿಟಲ್ ಬಿಪಿ ಉಪಕರಣ, ಗ್ಲುಕೊಮೀಟರ್, ಇನ್ಫ್ರಾರೆಡ್ ಥರ್ಮಾಮೀಟರ್, ಹಿಮೋಗ್ಲೋಬಿನೋಮೀಟರ್, ತೋಳಿನ ಮಧ್ಯದ ಸುತ್ತಳತೆ ಟೇಪ್, ಡಿಜಿಟಲ್ ತೂಕದ ಯಂತ್ರ, ಸ್ಟೇಡಿಯೊ ಮೀಟರ್, ಬಿ ಎಂ ಐ ಟಾರ್ಚ್ ಗಳು ಮತ್ತು ಅಪ್ಲಿಕೇಷನ್ ಗಳು ಇದೆ ಎಂದು ಹೇಳಿದರು. ಅಸಾಂಕ್ರಾಮಿಕ ರೋಗಗಳ ಸ್ಕ್ರೀನಿಂಗ್, ಟಿ.ಬಿ ಸ್ಕ್ರೀನಿಂಗ್, ಅಪೌಷ್ಟಿಕತೆ, ರಕ್ತಹೀನತೆ, ಮಾನಸಿಕ ಆರೋಗ್ಯಕ್ಕೆ ಬೆಂಬಲ, ಹದಿಹರೆಯದವರ ಸಮಸ್ಯೆಗಳು, ಬಾಲ್ಯ ವಿವಾಹ ತಡೆ, ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಕುರಿತು ಅರಿವು ಮೂಡಿಸುವುದು ಅಭಿಯಾನದ ಕಾರ್ಯಚಟುವಟಿಕೆಗಳು ಎಂದು ಸಭೆಗೆ ತಿಳಿಸಿದರು.
ಅಭಿಯಾನದ ಉದ್ದೇಶದ ಕುರಿತು ಅಧ್ಯಕ್ಷೆ ಗೀತಾ.ಡಿ ಮಾತನಾಡಿ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದ ಸಾಮಾನ್ಯ ಅರೋಗ್ಯ ತಪಾಸಣೆ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವುದರ ಮೂಲಕ ‘ಎಲ್ಲರಿಗೂ ಆರೋಗ್ಯ, ಎಲ್ಲೆಡೆಯೂ ಆರೋಗ್ಯ’ ಆಗಬೇಕು. ಗ್ರಾಮೀಣ ಜನತೆಯಲ್ಲಿ ಇರುವಂತಹ ಜೀವನ ಶೈಲಿ ಅಧಾರಿತ ಅಸಾಂಕ್ರಾಮಿಕ ರೋಗಗಳು, ಪ್ರಾಥಮಿಕ ರೋಗ ಪತ್ತೆ ಹಚ್ಚುವಿಕೆ ಈ ಅಭಿಯಾನದ ಪ್ರಮುಖ ಉದ್ದೇಶ ಎಂದು ಹೇಳಿದರು.
ಸಮುದಾಯ ಆರೋಗ್ಯ ಅಧಿಕಾರಿ ಲಕ್ಷ್ಮೀ, ನಿಡ್ಪಳ್ಳಿ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಹೇಮಾ.ಎನ್, ಮುಂಡೂರು ಶಾಲಾ ಸಹಶಿಕ್ಷಕಿ ಸಾವಿತ್ರಿ, ಆಶಾ ಕಾರ್ಯಕರ್ತೆಯರಾದ ಸುಮತಿ.ಎ, ದಿವ್ಯಾ.ಸಿ.ಎಚ್, ಗೀತಾ, ಪವಿತ್ರಕುಮಾರಿ, ಮುಂಡೂರು ಅಂಗನವಾಡಿ ಕಾರ್ಯಕರ್ತೆ ದೇವಕಿ. ಸಿ,ಎಚ್,ನಿಡ್ಪಳ್ಳಿ ಅಂಗನವಾಡಿ ಕಾರ್ಯಕರ್ತೆ ಜಯಂತಿ, ಜನತಾ ಕಾಲನಿ ಅಂಗನವಾಡಿ ಕಾರ್ಯಕರ್ತೆ ಸುಧಾ.ಎಸ್.ರೈ, ಚೂರಿಪದವು ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ, ಜಿ.ಪಿ.ಎಲ್.ಎಫ್ ಅಧ್ಯಕ್ಷೆ ಚಿತ್ರಾ ಸೇರಿದಂತೆ ಮಹಿಳೆಯರು ಪಾಲ್ಗೊಂಡರು.
ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ರೇವತಿ, ಸಂಶೀನಾ, ವಿನೀತ್ ಕುಮಾರ್, ಜಯ ಕುಮಾರಿ ಸಹಕರಿಸಿದರು.