ಕಾವು ಸರಕಾರಿ ಮಾದರಿ ಹಿ.ಪ್ರಾ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ರೆಡ್ ಡೇ ಕಾರ್ಯಕ್ರಮ

0

ಕಾವು: ಕಾವು ಸರಕಾರಿ ಉನ್ನತೀಕರಿಸಿದ ಮಾದರಿ ಹಿ.ಪ್ರಾ ಶಾಲೆಯ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ರೆಡ್ ಡೇ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಶಾಲಾ ಎಲ್‌ಕೆಜಿ, ಯುಕೆಜಿ ನಿರ್ವಹಣಾ ಸಮಿತಿ ಅಧ್ಯಕ್ಷ ಹಾಗೂ ಕಾವು ಶಾಲೆಯನ್ನು ದತ್ತು ಸ್ವೀಕರಿಸಿರುವ ಕಾವು ಹೇಮನಾಥ ಶೆಟ್ಟಿಯವರು ಸಭಾಧ್ಯಕ್ಷತೆ ವಹಿಸಿದ್ದರು. ಎಲ್‌ಕೆಜಿ, ಯುಕೆಜಿ ನಿರ್ವಹಣಾ ಸಮಿತಿ ಕಾರ್ಯದರ್ಶಿ ಹರೀಶ್ ಕುಂಜತ್ತಾಯ, ಎಸ್‌ಡಿಎಂಸಿ ಸದಸ್ಯ ಹೇಮನಾಥ, ಪ್ರಭಾರ ಮುಖ್ಯಶಿಕ್ಷಕಿ ಸವಿತಾ ಕುಮಾರಿ, ಸಹಶಿಕ್ಷಕ ಭಾಸ್ಕರರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆಂಪು ಬಣ್ಣದ ವಸ್ತುಗಳ ಸಂಗ್ರಹ ಮತ್ತು ಕೆಂಪು ಬಣ್ಣದ ವಸ್ತ್ರಧರಿಸಿದ್ದ ಎಲ್‌ಕೆಜಿ, ಯುಕೆಜಿ ಮಕ್ಕಳು ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಮನರಂಜನೆ ನಡೆಯಿತು.

ಜ್ಞಾನದೀಪ ವಿದ್ಯಾಸಂಸ್ಥೆಯ ಡಿ.ಎಂಎಡ್ ವಿದ್ಯಾರ್ಥಿ ಶಿಕ್ಷಕಿ ಪೂರ್ಣಿಮಾ ಗಿರೀಶ್ ಗೌಡ ಕುತ್ತಿಮುಂಡರವರು ಸಹಕರಿಸಿದರು. ಎಲ್‌ಕೆಜಿ, ಯುಕೆಜಿ ಶಿಕ್ಷಕಿಯರಾದ ಪೂರ್ಣಿಮಾ ಸ್ವಾಗತಿಸಿ, ಅರ್ಚನಾ ವಂದಿಸಿ, ನಿವೇದಿತಾ ರಾಘವ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕ ವೃಂದ, ಸಿಬ್ಬಂದಿಗಳು, ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here