ವಿವೇಕಾನಂದ IAS ಅಧ್ಯಯನ ಕೇಂದ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ವಾರಾಂತ್ಯದ ತರಗತಿಗಳು ಆರಂಭ

0

ಪುತ್ತೂರು, ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ವಿವೇಕಾನಂದ IAS ಅಧ್ಯಯನ ಕೇಂದ್ರ -ಯಶಸ್ ನೆಹರು ನಗರ ಪುತ್ತೂರು ಇಲ್ಲಿ ಕಳೆದ ೮ ವರ್ಷಗಳಿಂದ ನಿರಂತರವಾಗಿ ಆಸಕ್ತ ವಿದ್ಯಾರ್ಥಿಗಳಿಗೆ IAS, IPS ಆಗೂ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ಶಿಕ್ಷಣ ನೀಡುತ್ತಾ ಬಂದಿದೆ.

ಇದೀಗ ಜಿಲ್ಲೆಯ ಹಾಗೂ ಆಸುಪಾಸಿನ ಆಸಕ್ತ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ಯುವ ಉದ್ಯಮಿಗಳಿಗಾಗಿ ಐದು ತಿಂಗಳ ವಾರಾಂತ್ಯದ ಸಶುಲ್ಕ ತರಗತಿಗಳು ಇದೇ ಡಿಸೆಂಬರ್ ೨೫ ರಿಂದ ಪ್ರಾರಂಭವಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಪಾರ ಅನುಭವ ಇರುವ ತಜ್ಞ ತರಬೇತುದಾರರಿಂದ ತರಗತಿಗಳು ನಡೆಯಲಿದೆ. ಆಸಕ್ತ ಕಲಿಕಾರ್ಥಿಗಳಿಗೆ ವಸತಿ ನಿಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಈಗಾಗಲೇ ಬಹಳಷ್ಟು ನೋಂದಣಿಯಾಗಿದ್ದು ಇನ್ನು ಕೇವಲ ಕೆಲವೇ ಸೀಟುಗಳು ಮಾತ್ರ ಇದೆ. ಆಸಕ್ತರು ವಿವೇಕಾನಂದ IAS ಅಧ್ಯಯನ ಕೇಂದ್ರ -ಯಶಸ್ ಸಂಚಾಲಕರಾದ ಪುತ್ತೂರು ಉಮೇಶ್ ನಾಯಕ್ ಅವರ ದೂರವಾಣಿ ಸಂಖ್ಯೆ 9844401295 ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು.

LEAVE A REPLY

Please enter your comment!
Please enter your name here