ಡಾ.ಪನ್ನೆಗುತ್ತು ಜಯರಾಮ್ ರೈಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

0

ಪುತ್ತೂರು: ಸವಣೂರುಗುತ್ತು ದಿ.ವೆಂಕಪ್ಪರೈ ಮತ್ತು ಪನ್ನೆಗುತ್ತು ದಿ.ನೀಲಮ್ಮ ದಂಪತಿಯ ಪುತ್ರ ಡಾ. ಪನ್ನೆಗುತ್ತು ಜಯರಾಮ ರೈ ಯವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮ ಡಿ.22 ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ನಡೆಯಿತು.


ಬೆಳ್ಳಾರೆ ಪ್ರದೀಪ್ ಕುಮಾರ್ ರೈ ನುಡಿನಮನ ಸಲ್ಲಿಸಿ ದೇಶ ವಿದೇಶದಲ್ಲಿ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಇವರು ಮಂಗಳೂರಿನ ಹಲವು ಪ್ರಖ್ಯಾತ ಆಸ್ಪತ್ರೆಗಳಲ್ಲಿ ಅನಸ್ತೇಟಿಸ್ಟ್ ಆಗಿದ್ದರು. ವೃತ್ತಿಯಲ್ಲಿ ವೈದ್ಯರಾಗಿದ್ದರೂ ಪ್ರವೃತ್ತಿಯಲ್ಲಿ ಉತ್ತಮ ಕೃಷಿಕರಾಗಿದ್ದರು, ಕಠಿಣ ಪರಿಶ್ರಮಿ, ಕೊಡುಗೈ ದಾನಿ, ಧಾರ್ಮಿಕ ಮುಂದಾಳು ಆಗಿದ್ದ ಇವರು ಶ್ರೀಕಲ್ಲಗುಡ್ಡೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮುಕ್ತೇಸರರಾಗಿ , ಬೆಳ್ಳಾರೆ ಅಜಪ್ಪಿಲ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 1947 ರಲ್ಲಿ ಜನಿಸಿದ ಇವರು 75 ವರ್ಷಗಳ ಸಂತೃಪ್ತ ಜೀವನ ನಡೆಸಿ ಇಹಲೋಕವನ್ನು ತ್ಯಜಿಸಿದರೂ ಇವರ ಆದರ್ಶ ಜೀವನ ಎಲ್ಲರಿಗೂ ಅನುಕರಣೀಯ ಎಂದರು. ಬಳಿಕ ಜಯರಾಮ ರೈಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ನಿಟ್ಟೆ ಸಮೂಹ ಸಂಸ್ಥೆಗಳ ಚೆಯರ್‌ಮೆನ್ ನಿಟ್ಟೆ ವಿನಯ ಹೆಗ್ಡೆ, ಖ್ಯಾತ ಮೂಳೆ ತಜ್ಞ ಡಾ. ಶಾಂತರಾಮ್ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹೈಕೊರ್ಟ್ ನ್ಯಾಯಾದೀಶ ಸವಣೂರು ವಿಶ್ವಜೀತ್ ಶೆಟ್ಟಿ, ನಿಟ್ಟೆ ಯುನಿವರ್ಸಿಟಿಯ ವೈಸ್ ಚಾನ್ಸೆಲರ್ ಡಾ. ಸತೀಶ್ ಭಂಡಾರಿ, ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಮೃತರ ಪತ್ನಿ ವಿಜಯಲಕ್ಷ್ಮೀ ಜೆ. ರೈ ಸವಣೂರುಗುತ್ತು, ಪುತ್ರರಾದ ಸಂದೇಶ್ ರೈ, ಸಚಿನ್ ರೈ, ಸೊಸೆ ಅಕ್ಷತಾ ಸಂದೇಶ್,ಮೊಮ್ಮಗ ಅಯಾನ್ಶ್ ಸಹೋದರ ಪನ್ನೆಗುತ್ತು ಶ್ರೀಧರ್ ರೈ, ಸಹೋದರಿ ಪನ್ನೆಗುತ್ತು ವಿನತ ರೈ ಹಾಗೂ ಕುಟುಂಬಸ್ಥರು ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here