ಹಿಂದೂ ವಿರೋಧಿ ಲೇಖನ ಪ್ರಕಟಿಸಿದ ಆರೋಪ – ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಭಜನಾ ಪರಿಷತ್ ವತಿಯಿಂದ ವಿಟ್ಲ ಪೊಲೀಸ್ ಠಾಣೆಗೆ ಮನವಿ

0

ವಿಟ್ಲ: ಹಿಂದೂ ವಿರೋಧಿ ಲೇಖನ ಪ್ರಕಟಿಸಿ ಧಾರ್ಮಿಕ ಭಾವನೆಗೆ ದಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ರವರ ವಿರುದ್ಧ ಕ್ರಮ ಜರುಗಿಸುವಂತೆ ವಿಟ್ಲ ಸೀಮೆಯ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ ನಿಂದ ವಿಟ್ಲ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು.

ಉಪವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಎಂಬವರು ತನ್ನ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಅತ್ಯಂತ ಕೀಳು ಮಟ್ಟದ ಭಾಷೆಯನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕುಣಿತ ಭಜನೆಯ ವಿಚಾರವನ್ನು ತಪ್ಪು ಮಾಹಿತಿಯಿಂದ ಕೂಡಿದಂತಹ ಸಂದೇಶ ಲೇಖನ ಪ್ರಕಟಿಸಿದ್ದಾರೆ. ಅಶ್ಲೀಲವಾಗಿ ಬರೆದು ನಿಂದಿಸಲಾಗಿದೆ. ಮಹಿಳೆಯರ ಚಾರಿತ್ರ್ಯಕ್ಕೆ ಗೌರವಕ್ಕೆ ದಕ್ಕೆ ತರುವ ಒಳಾರ್ಥ ಹೊಂದಿರುವ ಅಶ್ಲೀಲ ಪದ ಬಳಕೆ ಮಾಡಿ ಅದನ್ನು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು , ಇದು ಸಮಾಜದ ಭಿನ್ನ ವರ್ಗಗಳ ಮಧ್ಯದಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಸಂಘರ್ಷ ಹುಟ್ಟು ಹಾಕುವ ರೀತಿಯಲ್ಲಿ ಗುಂಪುಗಳ ಮಧ್ಯೆ ಸಂಘಟನೆಗಳ ಮಧ್ಯೆ ಗಲಭೆ ಹುಟ್ಟುವಂತೆ ಸಾಮಾಜಿಕ ಸಾಮರಸ್ಯ, ಸ್ವಾಸ್ಥ್ಯ ಕದಡುವ ರೀತಿಯಲ್ಲಿ ಇಲ್ಲ ಸಲ್ಲದ ಸುಳ್ಳು ಸಂದೇಶ ರವಾನಿಸಿರುತ್ತಾರೆ ಎಂದು ಭಜನಾ ಪರಿಷತ್ ನಿಂದ ನೀಡಿದ ಮನವಿಯಲ್ಲಿ ವಿವರಿಸಲಾಗಿದೆ. ವಿಟ್ಲ ಠಾಣಾ ಎಸ್.ಐ. ಸಂದೀಪ್ ಕುಮಾರ್ ಶೆಟ್ಟಿ ಮನವಿ ಸ್ವೀಕರಿಸಿದರು.

ಭಜನಾ ಪರಿಷತ್ ಅಧ್ಯಕ್ಷ ಕೃಷ್ಣಯ್ಯ ಕೆ, ಕಾರ್ಯದರ್ಶಿ ಜಯರಾಮ ನಾಯ್ಕ ಕುಂಟ್ರಕಲ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪದ್ಮನಾಭ ಕಟ್ಟೆ, ಭಜನಾ ಪರಿಷತ್ ನ ಪ್ರಮುಖರಾದ ಭಾಸ್ಕರ ಕಾಮಟ, ಮಾಧವ ಬಂಗೇರ ಕೇಪುಳ ಗುಡ್ಡೆ, ರಮೇಶ್ ಕಡಂಬು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here