ಉಪ್ಪಿನಂಗಡಿ: ಗಂಡಿಬಾಗಿಲು ಎಸ್.ಕೆ.ಎಸ್.ಎಸ್.ಎಫ್. ಶಾಖೆ ಆಶ್ರಯದಲ್ಲಿ ಕುತುಬಿಯಾ ಜುಮಾ ಮಸೀದಿ ಗಂಡಿಬಾಗಿಲು ಮತ್ತು ನುಜೂಮುಲ್ ಇಸ್ಲಾಂ ಯಂಗ್ಮೆನ್ಸ್ನ ಸಹಕಾರದೊಂದಿಗೆ ಸಮಸ್ತ ಅಗಲಿದ ನೇತಾರರ ಅನುಸ್ಮರಣೆ ಮತ್ತು ಡಾ. ಕೆ.ಎಂ. ಶಾಹ್ ಉಸ್ತಾದ್ರವರ ಮಕ್ಬರ ಕಟ್ಟಡ ಉದ್ಘಾಟನೆ ಹಾಗೂ ಏಕದಿನ ಮತ ಪ್ರಭಾಷಣ ಕಾರ್ಯಕ್ರಮ ಗಂಡಿಬಾಗಿಲು ಮಸೀದಿ ವಠಾರದಲ್ಲಿ ಡಿ. 26 ರಂದು ಜರಗಲಿದೆ ಎಂದು ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಡಿ. 26 ರಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಗೌರವಾಧ್ಯಕ್ಷ ಸಯ್ಯದ್ ಝೈನುಲ್ ಆಬಿದಿನ್ ತಂಙಳ್ ದುಗ್ಗಲಡ್ಕ ಕಟ್ಟಡ ಉದ್ಘಾಟಿಸಲಿದ್ದಾರೆ. ಆತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಜುನೈದ್ ಜಿಫ್ರಿ ತಂಙಳ್ ದುವಾಃ ನೆರವೇರಿಸಲಿದ್ದಾರೆ. ಕರ್ವೇಲ್ ಜುಮಾ ಮಸೀದಿ ಖತೀಬ್ ಸಯ್ಯದ್ ಅನಸ್ ತಂಙಳ್ ಅಲ್ಹಝ್ಹರಿ ಅಧ್ಯಕ್ಷತೆ ವಹಿಸಲಿದ್ದು, ಗಂಡಿಬಾಗಿಲು ಜುಮಾ ಮಸೀದಿ ಖತೀಬ್ ಕೆ.ಎಸ್. ಅಬ್ದುಲ್ ಹಮೀದ್ ಸೌಕತ್ ಫೈಝಿ ಪ್ರಾಸ್ತಾವಿಕ ವಿಷಯ ಮಂಡಿಸಲಿದ್ದಾರೆ.
ಅನುಸ್ಮರಣೆ, ಧಾರ್ಮಿಕ ಉಪನ್ಯಾಸ:
ಸಂಜೆ ಮಗ್ರಿಬ್ ನಮಾಜಿನ ಬಳಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಸಮಸ್ತ ಅಗಲಿದ ನೇತಾರರ ಅನುಸ್ಮರಣಾ ಕಾರ್ಯಕ್ರಮ ನಡೆಯಲಿದ್ದು, ಸ್ವಾಗತ ಸಮಿತಿ ಅಧ್ಯಕ್ಷ ಹಸೈನಾರ್ ಹಾಜಿ ಕೊಲ ಅಧ್ಯಕ್ಷತೆ ವಹಿಸಲಿದ್ದು, ಕೆ.ಎಸ್. ಅಬ್ದುಲ್ ಹಮೀದ್ ಸೌಕತ್ ಫೈಝಿ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರಾಗಿ ಆಯ್ಕೆಯಾಗಿರುವ ಉಸ್ಮಾನ್ ಫೈಝಿ ತೋಡಾರು ಉಸ್ತಾದ್ರವರಿಗೆ ಗೌರವ ಅರ್ಪಣೆ ನಡೆಯಲಿದೆ. ಆ ನಂತರ ಯು.ಕೆ. ಮಹಮ್ಮದ್ ಹನೀಫ್ ನಿಝಾಮಿ ಮಂಜೇಶ್ವರ ಇವರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಸಮಾರಂಭದಲ್ಲಿ ಆರಂತೋಡು ಜುಮಾ ಮಸೀದಿ ಖತೀಬ್ ಹಾಜಿ ಇಸಾಕ್ ಬಾಖಾವಿ, ಬಶೀರ್ ಶಾ ಆತೂರು, ಹುಸೈನ್ ದಾರಿಮಿ ರೆಂಜಲಾಡಿ, ಎಸ್.ಬಿ. ಮಹಮ್ಮದ್ ದಾರಿಮಿ, ಅಬ್ದುಲ್ ಸಲಾಂ ಫೈಝಿ ಎಡಪ್ಪಾಲ, ಕೆ.ಎಂ.ಎಚ್. ಫಾಝಿಲ್ ಹನೀಫಿ, ಕೆ.ಎಂ. ಅಬ್ದುಲ್ ರಹಿಮಾನ್ ಫೈಝಿ ಕೊಂತೂರು, ಯೂಸುಫ್ ಅಲ್ಖಾಸಿಮಿ ಗಂಡಿಬಾಗಿಲು, ಗಂಡಿಬಾಗಿಲು ಮಸೀದಿ ಅಧ್ಯಕ್ಷ ಆದಂ ಹಾಜಿ ಬಡ್ಡಮೆ, ಕಾರ್ಯದರ್ಶಿ ಎಸ್. ಆದಂ ಹಾಜಿ ಮತ್ತಿತರ ಪ್ರಮುಖರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.