ಬಿಗ್‌ಬಾಸ್ ವೇದಿಕೆಯಲ್ಲಿ ಕಲ್ಲೇಗ ಟೈಗರ‍್ಸ್ !

0

ಇಂದು(ಡಿ.28): ರಾತ್ರಿ ಪ್ರಸಾರ

ಪುತ್ತೂರು: ಕಲರ‍್ಸ್ ಕನ್ನಡ ಚಾನೆಲ್‌ನಲ್ಲಿ ಬಿಗ್‌ಬಾಸ್ ಸೀಸನ್ ಸ್ಪರ್ಧೆಯು ಫೈನಲ್ ಹಂತಕ್ಕೆ ತುಲುಪುತ್ತಿದ್ದು, ಈ ಸಂದರ್ಭ ಸ್ಪರ್ಧೆಯಲ್ಲಿರುವ ರೂಪೇಶ್ ಶೆಟ್ಟಿಯವರ ಆಸೆಯಂತೆ ಹುಲಿ ನೃತ್ಯಕ್ಕೆ ಅವಕಾಶ ನೀಡಲಾಗಿತ್ತು. ಈ ನೃತ್ಯಕ್ಕೆ ಪುತ್ತೂರು ಕಲ್ಲೇಗ ಟೈಗರ‍್ಸ್ ತಂಡಕ್ಕೆ ಅವಕಾಶ ಸಿಕ್ಕಿದೆ. ಡಿ.28ರ ರಾತ್ರಿ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಹುಲಿ ಕುಣಿತ ಪ್ರದರ್ಶನಗೊಳ್ಳಲಿದೆ.

ಬಿಗ್‌ಬಾಸ್ ಸೀಸನ್ ಪೈನಲ್ ಹಂತಕ್ಕೆ ತಲುಪಿದ್ದು, ಕೊನೆಯ ವಾರದ ಅಖಾಡಕ್ಕೆ ಸ್ಫರ್ಥಿಗಳು ಎಂಟ್ರಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ರೂಪೇಶ್ ಶೆಟ್ಟಿ ತನ್ನ ಆಸೆಯನ್ನ ಬಿಗ್‌ಬಾಸ್ ಮನೆಯಲ್ಲಿ ಈಡೇರಿಸುವಂತೆ ಕೇಳಿಕೊಂಡಿದ್ದಾರೆ. ’ಮಂಗಳೂರು ದಸರಾ ಪ್ರಮುಖ ವಿಶೇಷತೆ ಹುಲಿ ನೃತ್ಯ. ಆ ಹುಲಿ ವೇಷ ಧರಿಸಿ ಬಿಗ್‌ಬಾಸ್ ಮನೆಯಲ್ಲಿ ಹುಲಿ ನೃತ್ಯಗಾರರೊಂದಿಗೆ ತಾನೂ ಹುಲಿ ನೃತ್ಯ ಮಾಡಬೇಕು’ ಎಂದು ಹೇಳಿಕೊಂಡಿದ್ದರು. ಅದನ್ನು ಬಿಗ್‌ಬಾಸ್ ಪೂರೈಸಿದೆ. ಬಿಗ್ ಬಾಸ್ ಮನೆಯಲ್ಲಿ ತಾಸೆಯ ಪೆಟ್ಟಿಗೆ ಪಿಲಿನಲಿಕೆಗೆ ’ಕಲ್ಲೆಗ ಟೈಗರ‍್ಸ್’ಗೆ ಅವಕಾಶ ಲಭಿಸಿದೆ.

LEAVE A REPLY

Please enter your comment!
Please enter your name here