ಸೌರವ್ಯೂಹದ ಎಲ್ಲಾ ಗ್ರಹಗಳು ಡಿ.28 ಬುಧವಾರ ರಾತ್ರಿ ಏಕಕಾಲದಲ್ಲಿ ಗೋಚರಿಸಿದ ಅಪರೂಪದ ವಿದ್ಯಮಾನವೊಂದು ನಡೆದಿದೆ. ಬರಿಗಣ್ಣಿನಿಂದ ಉತ್ತರ ಗೋಳಾರ್ಧದಲ್ಲಿ ಶುಕ್ರ, ಬುಧ, ಶನಿ, ಗುರು, ಮಂಗಳ ಗ್ರಹವನ್ನು ನೋಡಲು ಸಾಧ್ಯವಾಗಿದೆ. ಯುರೇನಸ್ ಮತ್ತು ನೆಫ್ಚೂನ್ ಗ್ರಹಗಳನ್ನು ಬೈನಾಕ್ಯುಲರ್ ನಲ್ಲಿ ವೀಕ್ಷಿಸಲು ಸಾಧ್ಯವಾಯಿತು. ಎಲ್ಲಾ ಗ್ರಹಗಳು ಕೇವಲ 1.5 ಡಿಗ್ರೀ ಅಂತರದಲ್ಲಿ ಕಾಣಿಸಿಕೊಂಡಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.,