ದೇಶದ (HPCL) ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪರೇಷನ್ ಪ್ರೈ.ಲಿ. ನ ಖಾತೆಗೆ ಸೈಬರ್ ಅಟಾಕ್ ಆಗಿದ್ದು ದೇಶಾದಾಂದ್ಯಂತ ಸದರಿ ಸಂಸ್ಥೆಯ ಪೆಟ್ರೋಲಿಯಂ ಉತ್ಪನ್ನಗಳ ವಿತರಣೆಯಲ್ಲಿ ವ್ಯತ್ಯಯ(ಕೊರತೆ) ಉಂಟಾಗಿದೆ.
ಪಾಕಿಸ್ತಾನ ವಿರುದ್ದ ಭಾರತ ನಡೆಸಿದ ದಾಳಿಯ ಬಳಿಕ ಈ ವಿದ್ಯುನ್ಮಾನ ಸೈಬರ್ ಅಟಾಕ್ ನಡೆದಿದೆ. ಆದರೆ ಈ ಕುರಿತು HPCL ಸಂಸ್ಥೆ ಯಾವುದೇ ವಿವರಣೆಯನ್ನು ನೀಡಿಲ್ಲವಾದರೂ ಈ ದಾಳಿಯ ಬಳಿಕ ಇತರ ತೈಲ ಕಂಪೆನಿಗಳು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ತೈಲ ಸಾಗಾಟದ ವಾಹನಗಳು HPCL ತೈಲಾಗಾರದ ಮುಂದೆ ಸಾಲುಗಟ್ಟಿ ನಿಂತಿದೆ. ದೇಶದಾಂದ್ಯಂತ HPCL ಲಭ್ಯತೆಯಲ್ಲಿ ವ್ಯತ್ಯಯವಾಗಿದೆ. ಪುತ್ತೂರಿನ ಏಳ್ಮುಡಿಯಲ್ಲಿರುವ ಕೆ ವಿ ಶೆಣೈ ಪೆಟ್ರೋಲ್ ಬಂಕ್ ನಲ್ಲಿಯೂ ತೈಲದ ಕೊರತೆಯುಂಟಾಗಿದ್ದು, ಪೂರೈಕೆ ಸ್ಥಗಿತಗೊಂಡಿದೆ. ಸಂಜೆ ವೇಳೆಗೆ ಎಂದಿನಂತೆ ತೈಲ ಪೂರೈಕೆ ಸಾಧ್ಯತೆ ಇದೆ ಎನ್ನಲಾಗಿದೆ.