ನೆಟ್ಟಣ: ಗೂಡ್ಸ್ ರೈಲಿನಲ್ಲಿ ಅನಿಲ ಸೋರಿಕೆ !

0

ಮಂಗಳೂರು, ಪುತ್ತೂರು, ಸುಳ್ಯ ಅಗ್ನಿಶಾಮಕದಳದ ಕಾರ್ಯಾಚರಣೆ

ಪುತ್ತೂರು: ನಿಂತಿದ್ದ ಗೂಡ್ಸ್ ರೈಲಿನಲ್ಲಿ ಅನಿಲ ಸೋರಿಕೆ ಕಾಣಿಸಿಕೊಂಡ ಮತ್ತು ಪೈಲಟ್ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದ ಘಟನೆ ನೆಟ್ಟಣ ರೈಲ್ವೇ ನಿಲ್ದಾಣದಲ್ಲಿ ಡಿ.31 ನಸುಕಿನ ಜಾವ ನಡೆದಿದ್ದು, ಮಂಗಳೂರು, ಪುತ್ತೂರು, ಸುಳ್ಯ ಅಗ್ನಿಶಾಮಕದಳ ಮತ್ತು ರೈಲ್ವೇ ಇಲಾಖೆಯ ಸಹಕಾರದೊಂದಿಗೆ ಅನಿಲ ಸೋರಿಕೆಯನ್ನು ತಡೆಯುವ ಕಾರ್ಯಚರಣೆ ನಡೆದಿದೆ.

ಮಂಗಳೂರಿನಿಂದ ಮಹರಾಷ್ಟ್ರಕ್ಕೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್ ರೈಲು ನೆಟ್ಟಣ ರೈಲ್ವೇ ನಿಲ್ದಾಣದಲ್ಲಿ ರಾತ್ರಿ ಗಂಟೆ 2.30ರ ಸುಮಾರಿಗೆ ಕ್ರಾಸಿಂಗ್‌ಗಾಗಿ ನಿಲ್ಲಿಸಿ ಪೈಲೆಟ್ ಕೆಳಗಿಳಿದಾಗ ಸುಮಾರು 43 ಗೂಡ್ಸ್ ಪ್ಯಾನೆಲ್‌ಗಳ ಪೈಕಿ ನಾಲ್ಕನೇ ಟ್ಯಾಂಕ್‌ನಿಂದ ಅನಿಲ ಸೋರಿಕೆ ಬೆಳಕಿಗೆ ಬಂದಿದ್ದು, ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ರೈಲ್ವೇ ನಿಲ್ದಾಣದಿಂದ ಪುತ್ತೂರು ಅಗ್ನಿಶಾಮಕದಳಕ್ಕೆ ಬಂದ ಕರೆಯಂತೆ ರಾತ್ರೋ ರಾತ್ರಿ ನೆಟ್ಟಣಕ್ಕೆ ತೆರಳಿದ ಕಾರ್ಯಾಚರಣೆ ನಡೆಸಿದರು. ಅನಿಲ ಸೋರಿಕೆಯಿಂದ ಅನಾಹುತ ತಡೆಯಲು ಮಂಗಳೂರು, ಸುಳ್ಯದಿಂದಲೂ ಹೆಚ್ಚುವರಿ ವಾಹನ ತರಿಸಲಾಯಿತು. ಮಂಗಳೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಅವರ ನೇತೃತ್ವದಲ್ಲಿ ಪುತ್ತೂರು ಅಗ್ನಿಶಾಮಕದಳದ ಠಾಣಾಧಿಕಾರಿ ವಿ.ಸುಂದರ್, ಮುಖ್ಯ ಅಗ್ನಿಶಾಮಕ ರುಕ್ಮಯ್ಯ ಗೌಡ, ಚಾಲಕ ಯಾದವ್, ಸಿಬ್ಬಂದಿಗಳಾದ ಮಂಜುನಾಥ್, ಗೃಹರಕ್ಷಕದಳದ ಮಂಜುನಾಥ್ ಸಹಿತ ಸುಳ್ಯದ ಅಗ್ನಶಾಮಕದಳದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here