





ಪುತ್ತೂರು:ರೈಲು ನಿಲ್ದಾಣದ ಬಳಿಯ ಶ್ರೀಲಕ್ಷ್ಮೀದೇವಿ ಬೆಟ್ಟದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಜ.1ರಂದು ನೆರವೇರಿತು.








ಅರ್ಚಕರಾದ ರವಿರಾಮ ಹಾಗೂ ಮಹಾಬಲ ಭಟ್ರವರ ಪುರೋಹಿತ್ಯದಲ್ಲಿ ನಡೆದ ಪೂಜೆಯಲ್ಲಿ ಶ್ರೀ ಕ್ಷೇತ್ರದ ಧರ್ಮದರ್ಶಿ ಎನ್. ಐತ್ತಪ್ಪ ಸಪಲ್ಯರವರು ದೀಪ ಪ್ರಜ್ವಲನೆ ಮಾಡಿದರು. ನಂತರ ಸತ್ಯನಾರಾಯಣ ಪೂಜೆ ಪ್ರಾರಂಭಗೊಂಡು ಮಧ್ಯಾಹ್ನ ಮಹಾಪೂಜೆ, ಮಹಾಲಕ್ಷ್ಮೀ ದೇವಿಗೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ನೂರಾರು ಮಂದಿ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.








