ಪುತ್ತೂರಿನ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಅಟಲ್ ಟಿಂಕರಿಂಗ್ ಮತ್ತು ನೂತನ ವಿಶಿಷ್ಠ ವಿಜ್ಞಾನ ಪ್ರಯೋಗಾಲಯ ಕಾರ್ಯಗಾರದ ಉದ್ಘಾಟನೆಯು ಡಿ.31 ರಂದು ಜರಗಿತು.
ಕಾರ್ಯಕ್ರಮವನ್ನು ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು ದೀಪ ಬೆಳಗಿಸಿ ಉದ್ಘಾಟಿಸಿ ಮಕ್ಕಳಿಗೆ ವಿಜ್ಞಾನ ಪ್ರಯೋಗಾಲಯದ ಮಹತ್ವವನ್ನು ತಿಳಿಸಿದರು ಮತ್ತು ಈ ಕಾರ್ಯಾಗಾರವು ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರದಂದು ನಡೆಯಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬಂಟರ ಯಾನೆ ಮಾತೃ ಸಂಘ ದ,ಕ ಮಂಗಳೂರು ಇದರ ಪುತ್ತೂರು ತಾಲೂಕು ಸಮಿತಿಯ ಸಂಚಾಲಕರಾಗಿ ನೂತನವಾಗಿ ಆಯ್ಕೆಯಾದ ದಯಾನಂದ ರೈ ಮನವಳಿಕೆ ಮತ್ತು ಸಹ ಸಂಚಾಲಕರಾಗಿ ಆಯ್ಕೆಯಾದ ಜಯಪ್ರಕಾಶ್ ರೈ ನೂಜಿಬೈಲು ಇವರನ್ನು ಅಭಿನಂದಿಸಲಾಯಿತು.
ಈ ಕಾರ್ಯಗಾರವು ವಿಶ್ರಾಂತ ರಾಜ್ಯ ಪ್ರಶಸ್ತಿ ವಿಜೇತ ವಿಜ್ಞಾನ ಶಿಕ್ಷಕರಾದ ವಸಂತಿ ಕೆ ಇವರ ಮಾರ್ಗದರ್ಶನದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ ಪ್ರಬಂಧ ಮಂಡನೆಮಾಡಿ ಪದಕ ವಿಜೇತರಾದ ಹಿರಿಯ ವಿದ್ಯಾರ್ಥಿಗಳಾದ ಭಾರ್ಗವ್, ರಾಮನಾಥ್ ರಾವ್ ಬೇಕಲ್, ಹಾಗೂ ಪ್ರತೀಕ್ಷಾ ರವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕಾವು ಇಲ್ಲಿಯ ಸುಮಾರು 30 ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಯೋಗಾಲಯದ ಮಾದರಿಗಳನ್ನು ಹಾಗೆಯೇ ಅಟಲ್ ಟಿಂಕರಿಂಗ್ ಲ್ಯಾಬ್ ನ ಇಲೆಕ್ಟ್ರಾನಿಕ್ಸ್ ಬಿಡಿ ಭಾಗಗಳನ್ನು ಪರಿಚಯಿಸಿ, ಇತರೇ ಇಲೆಕ್ಟ್ರಾನಿಕ್ಸ್ ವಸ್ತುಗಳಲ್ಲಿ ಅದು ಹೇಗೆ ಉಪಯೋಗಿಸಲ್ಪಡುತ್ತದೆ ಎಂದು ವಿವರಿಸುವ ಮೂಲಕ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ , ದುರ್ಗಾಪ್ರಸಾದ್ ರೈ ಕುಂಬ್ರ , ಪುರಂದರ ರೈ ಮಿತ್ರಂಪಾಡಿ, ನೊಣಾಲು ಜೈರಾಜ್ ಭಂಡಾರಿ, ವಾಣಿ ಎಸ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಬಾರ ಮುಖ್ಯ ಶಿಕ್ಷಕಿ ಸುನಿತಾ ಎಂ ಸ್ವಾಗತಿಸಿ, ಶಿಕ್ಷಕಿ ಸುಚಿತ್ರಾ ಕೆ. ಬಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಶಾಲಾ ವಿಜ್ಞಾನ ಶಿಕ್ಷಕಿಯರಾದ ಅಶ್ವಿನಿ ಬಿ ವಿ, ಮಾನಸ ವಿ, ಚೈತ್ರ ಡಿ ಮತ್ತು ಶಿಕ್ಷಕಿವೃಂದದವರು ಸಹಕರಿಸಿದರು.