ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅರ್ಧ ಏಕಾಹ ಭಜನೆ, ಉಲ್ಪೆ ಮೆರವಣಿಗೆ

0

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿರುವ ಶಾರದಾ ಭಜನಾ ಮಂದಿರದಲ್ಲಿ 86ನೇ ವರ್ಷದ ಅರ್ಧ ಏಕಾಹ ಭಜನೆಯು ಜ.2ರ ಸೂರ್ಯೋದಯದಿಂದ ರಾತ್ರಿ 8ರ ವರೆಗೆ ವಿವಿಧ ಭಜನಾ ಮಂಡಳಿಗಳ ಸಹಕಾರದೊಂದಿಗೆ ನಡೆಯಿತು.

ಡಿ.24ರಂದು ನಗರ ಸಂಕೀರ್ತನೆ ಪ್ರಾರಂಭಗೊಂಡಿದ್ದು ಏಕಾಹ ಭಜನೆಯ ಪ್ರಯುಕ್ತ ಜ.2ರಂದು ಸಂಜೆ 7ಕ್ಕೆ ಉಲ್ಪೆ ಮೆರವಣಿಗೆ (ಹಣ್ಣು ಹಂಪಲು) ನಡೆದು ರಾತ್ರಿ 8ಕ್ಕೆ ಮಂಗಳಾಚರಣೆಯೊಂದಿಗೆ ಅರ್ಧ ಏಕಾಹ ಭಜನೆ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಮಂದಿರದ ಅರ್ಚಕರು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.

 

 

LEAVE A REPLY

Please enter your comment!
Please enter your name here