ವಿಟ್ಲ: ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಮಿತ್ತೂರು ರೈಲ್ವೆ ಫ್ಲೈ ಓವರ್ ಸೇಫ್ ಗಾರ್ಡ್ ಗೆ ಕಂಟೈನರ್ ಲಾರಿಯೊಂದು ಡಿಕ್ಕಿಯಾದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಅಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿ ಮಿತ್ತೂರಿನಲ್ಲಿರುವ ರೈಲ್ವೇ ಸೇಫ್ ಗಾರ್ಡ್ ಗೆ ಡಿಕ್ಕಿಯಾಗಿ ಸಿಕ್ಕಿ ಹಾಕಿಕೊಂಡಿದ್ದು, ಸವಾರರು ಅಲ್ಪ ಹೊತ್ತು ಪರದಾಟ ನಡೆಸುವಂತಾಯಿತು. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.