ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ನೆಲ್ಯಾಡಿ ಪೇಟೆಯಲ್ಲಿನ ಧೂಳಿನ ಸಮಸ್ಯೆ ಕುರಿತು ಕಾಮಗಾರಿ ಗುತ್ತಿಗೆದಾರರಾಗಿರುವ ಕೆಎನ್ಆರ್ ಕಂಪನಿ ಇಂಜಿನಿಯರ್ ಜೊತೆ ನೆಲ್ಯಾಡಿಯ ವರ್ತಕರ, ಗ್ರಾ.ಪಂ.ಆಡಳಿತ ಮಂಡಳಿ ಸಭೆ ಜ.11 ರಂದು ನೆಲ್ಯಾಡಿ ಗ್ರಾ.ಪಂ.ನಲ್ಲಿ ನಡೆಯಿತು.
ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷೆ ಚೇತನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೆಲ್ಯಾಡಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ಪದಾಧಿಕಾರಿಗಳಾದ ಗಣೇಶ್ ಕೆ.ರಶ್ಮಿ, ಮಹಮ್ಮದ್ ಹನೀಫ್ ಸಿಟಿ, ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಮಹಮ್ಮದ್ ಇಕ್ಬಾಲ್, ಜಯಾನಂದ ಬಂಟ್ರಿಯಾಲ್, ಸಲಾಂ ಪಡುಬೆಟ್ಟು, ಉಷಾ ಜೋಯಿ, ರೇಷ್ಮಾಶಶಿ, ಪುಷ್ಪಾಪಡುಬೆಟ್ಟು, ಜಯಂತಿ ಮಾದೇರಿ, ಆನಂದ ಪಿಲವೂರುರವರು ಉಪಸ್ಥಿತರಿದ್ದು ಹೆದ್ದಾರಿ ಕಾಮಗಾರಿಯಿಂದಾಗಿ ನೆಲ್ಯಾಡಿ ಪೇಟೆಯಲ್ಲಿ ಆಗುತ್ತಿರುವ ಸಮಸ್ಯೆ ಕುರಿತು ಕೆಆರ್ಆರ್ ಕಂಪನಿ ಇಂಜಿನಿಯರ್ರವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಇಂಜಿನಿಯರ್ ಕುಮಾರ್ರವರು, ಧೂಳಿನ ಸಮಸ್ಯೆಗೆ ಪರಿಹಾರವಾಗಿ ದಿನದಲ್ಲಿ ಎರಡರಿಂದ ಮೂರು ಸಲ ಟ್ಯಾಂಕರ್ನಲ್ಲಿ ನೀರು ಹಾಕಲಾಗುತ್ತಿದೆ. ಇನ್ನು ಮುಂದೆ ದಿನದಲ್ಲಿ ನಾಲ್ಕು ಸಲ ನೀರು ಹಾಕಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಪಿಡಿಒ ಮಂಜುಳ ಎನ್.,ಸ್ವಾಗತಿಸಿ, ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು.