





ಶ್ರೀ ಶಾರದಾ ಭಜನಾ ಮಂದಿರದ ವತಿಯಿಂದ ಜ.14ರಂದು ಸಂಜೆ 6ಕ್ಕೆ ಭಜನೆಯೊಂದಿಗೆ ಮಂದಿರದಿಂದ ಭಕ್ತಾದಿಗಳ ಪಾದಯಾತ್ರೆಯು ಬಲ್ನಾಡು ದಂಡನಾಯಕ ಶ್ರೀ ಉಳ್ಳಾಲ್ತಿ ದೈವಸ್ಥಾನದವರೆಗೆ ನಡೆಯಲಿರುವುದು.








ಕಳೆದ ಹಲವಾರು ವರ್ಷಗಳಿಂದ ಈ ಪದ್ಧತಿ ನಡೆಯುತ್ತಿದ್ದು ಮಕರ ಸಂಕ್ರಮಣದ ದಿನದಂದು ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದ ಸದಸ್ಯರೂ ಸೇರಿದಂತೆ ಭಕ್ತಾದಿಗಳು ಮೆರವಣಿಗೆ ಮೂಲಕ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಳ್ತಿ ದೈವಸ್ಥಾನಕ್ಕೆ ಭಜನೆ ಮೂಲಕ ತೆರಳುವರು. ಬಲ್ನಾಡು ದೈವಸ್ಥಾನಕ್ಕೆ ತೆರಳಿದ ಬಳಿಕ ನಡೆಯುವ ತಂಬಿಲ ಸೇವೆಯಲ್ಲಿ ಪಾಲ್ಗೊಂಡು ನಂತರ ಮೂಲ ದೈವಸ್ಥಾನಕ್ಕೆ ತೆರಳಿ ಅಲ್ಲಿ ಪ್ರದಕ್ಷಿಣೆ ಹಾಕುವ ಮೂಲಕ ಪುನಃ ದೈವಸ್ಥಾನಕ್ಕೆ ಬಂದು ಅಲ್ಲಿಂದ ಪುತ್ತೂರು ಮಂದಿರಕ್ಕೆ ತೆರಳಲಿದೆ ಎಂದು ಮಂದಿರದ ಪ್ರಕಟಣೆ ತಿಳಿಸಿದೆ.









