






ಪುತ್ತೂರು: ಸಾರಿಗೆ ಆಡಳಿತ ವರ್ಗ ಮತ್ತು ರಾಜ್ಯ ಸರಕಾರ ಸಾರಿಗೆ ನೌಕರರ ಬೇಡಿಕಗಳ ಕುರಿತು ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯೊಂದಿಗೆ ಚರ್ಚಿಸಿ, ಕೈಗಾರಿಕಾ ಒಪ್ಪಂದ ಮಾಡದೇ ಕಾಲ ಹರಣ ಮಾಡುತ್ತಿದ್ದಾರೆ ಮತ್ತು ನಮ್ಮ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಆಗ್ರಹಿಸಿ ಪುತ್ತೂರು ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಜ.24ರಂದು ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗೀಯ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಯಿತು.








ಕೆಎಸ್ಸಾರ್ಟಿಸಿ ಸ್ಟಾಫ್ ಆಂಡ್ ವರ್ಕರ್ಸ್ ಫೆಡರೇಷನ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಫೆಡರೇಷನ್, ಕೆಎಸ್ಸಾರ್ಟಿಸಿ ಎಸ್ಸಿ ಮತ್ತು ಎಸ್ಟಿ ಎಂಪ್ಲಾಯಿಸ್ ಯೂನಿಯನ್, ಎನ್.ಇ.ಕೆ.ಆರ್.ಟಿ.ಸಿ ಎಸ್ಸಿ ಮತ್ತು ಎಸ್ಟಿ ಎಂಪ್ಲಾಯಿಸ್ ಅಸೋಸಿಯೇಶನ್, ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕೆಎಸ್ಸಾರ್ಟಿಸಿ ಆಂಡ್ ಐಎಮ್‌ಟಿಸಿ ಯುನೈಟೆಡ್ ಎಂಪ್ಲಾಯಿಸ್ ಯೂನಿಯನ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ.ಜಾ/ಪ.ಪಂಗಳ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರು ಧರಣಿಯಲ್ಲಿ ಭಾಗವಹಿಸಿದ್ದರು. ಸುಮಾರು 14 ವಿವಿಧ ಬೇಡಿಕೆಗಳನ್ನು ಧರಣಿ ನಿರತರು ಕೆಎಸ್ಸಾರ್ಟಿಸಿ ನಿಗಮದ ಮುಂದಿಟ್ಟರು. ಧರಣಿ ಕೊನೆಯಲ್ಲಿ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿಯವರಗೆ ಮನವಿ ನೀಡಲಾಯಿತು.

ಕೆಎಸ್ಸಾರ್ಟಿಸಿ ನೌಕರರ ಫೆಡರೇಷನ್‌ನ ಅಧ್ಯಕ್ಷ ದಿನೇಶ್ ಸಿ.ಹೆಚ್. ಸ್ಟಾಫ್ ಆಂಡ್ ವರ್ಕರ‍್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಕೋಚಣ್ಣ ಪೂಜಾರಿ, ಎಸ್ಸಿ ಆಂಡ್ ಎಸ್.ಟಿ ನೌಕರರರ ಎಂಪ್ಲಾಯಿಸ್ ಉಪಾಧ್ಯಕ್ಷ ಬಾಬು ಮೇರ, ನಿವೃತ್ತ ಚಾಲಕರಾದ ಹೆನ್ರಿ ಗಲ್ಭಾವೋ, ಅನಿಲ್ ಪಾಯಸ್ ಅವರು ಮಾತನಾಡಿದರು.








