- ಹತ್ತು ಸಾವಿರಕ್ಕೂ ಅಧಿಕ ಮಂದಿ ಭಕ್ತರಿಗೆ ಅನ್ನಸಂತರ್ಪಣೆ
ಕೆಯ್ಯೂರು: ಕೆಯ್ಯೂರು ಗ್ರಾಮದ ಮಾಡಾವು ಶ್ರೀ ಹೊಸಮ್ಮದೈವಸ್ಥಾನ ಪಲ್ಲತ್ತಡ್ಕ ದಲ್ಲಿ ಶ್ರೀ ಹೊಸಮ್ಮ ದೈವದ ನೇಮೋತ್ಸವವು ಎ.5ರಂದು ನಡೆಯಿತು.
ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಕಳಶ ಪೂಜೆ, ಶ್ರೀ ನಾಗದೇವರಿಗೆ ತಂಬಿಲ ಸೇವೆ, ಪರಿವಾರ ದೈವಗಳನ್ನು ತಂಬಿಲ, ಶ್ರೀ ವೆಂಕಟರಮಣ ದೇವರ ಸೇವೆ, ಮಧ್ಯಾಹ್ನ ಶ್ರೀ ದೇವಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ತುಳುನಾಡಿನ ಕಾನತ್ತೂರು ಎಂದು ಪ್ರಸಿದ್ದಿ ಪಡೆದ ಪಲ್ಲತ್ತಡ್ಕ ಹೊಸಮ್ಮ ದೈವದ ನಿಹಾ ಕ್ರೀಯೆಷನ್ ಅರ್ಪಿಸುವ “ಪಲ್ಲತ್ತಡ್ಕದ ಪೊಸ ಅಪ್ಪೆ” ಮತ್ತು ಮಂದಾರ ಕ್ರಿಯೇಷನ್ ಅರ್ಪಿಸುವ “ಸತ್ಯೋದಪ್ಪೆ ಪೋಸಪ್ಪೆ” ದ್ವನಿ ಸುರುಳಿ ಅಲ್ಬಂ ಬಿಡುಗಡೆ ಗೊಳಿಸಲಾಯಿತು.
ಮಧ್ಯಾಹ್ನ ಶ್ರೀ ದೇವಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಹೊಸಮ್ಮ ದೈವದ ಭಂಡಾರ ತೆಗೆದು ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು.ಆಕರ್ಷಕ ಸಡುಮದ್ದು ಕಾರ್ಯಕ್ರಮ ನಡೆದು ಹತ್ತು ಸಾವಿರಕ್ಕೂ ಅಧಿಕ ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಪ್ರದಾನ ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು, ಜೀರ್ಣೋದ್ಧಾರ ಸಮಿತಿ ಜಯಂತ ನಡುಬೈಲು, ಪಲ್ಲತ್ತಡ್ಕ ಕುಟುಂಬಸ್ಥರು, ಭಕ್ತಾಧಿಗಳು ಉಪಸ್ಥಿತರಿದ್ದರು. ನಂತರ ಶ್ರೀ ಹೊಸಮ್ಮ ದೈವದ ನೇಮೋತ್ಸವವು ಬಹಳ ವಿಜೃಭಂಣೆಯಿಂದ ನಡೆದು ಭಕ್ತಾಧಿಗಳು ಗಂಧ-ಪ್ರಸಾದವನ್ನು ಸ್ವೀಕರಿಸಿದರು.