ಶಾಸಕರ ಜೊತೆ ಮಾತನಾಡಲು ಬಂದವರಲ್ಲದ ವಿಘ್ನ ಸಂತೋಷಿಗಳಿಂದ ಅಪಪ್ರಚಾರ – ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರಿಂದ ಹೇಳಿಕೆ

0

ಪುತ್ತೂರು: ಗುಂಡ್ಯದಲ್ಲಿ ನಡೆದ ಘಟನೆ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದ ಸಂದರ್ಭದಲ್ಲಿ ಉಪ್ಪಿನಂಗಡಿಯಲ್ಲಿ ರಾತ್ರಿ ಶಾಸಕರ ಜೊತೆ ಗುಂಡ್ಯದ ಬಿಜೆಪಿ, ಬಜರಂಗದಳ, ಹಿಂದುಜಾಗರಣ ವೇದಿಕೆ ಕಾರ್ಯಕರ್ತರು ಮಾತನಾಡಿದ ಬಳಿಕ ಹೊರಗಿನಿಂದ ಬಂದ ಕೆಲವರು ಶಾಸಕರ ವಿರುದ್ಧ ಧಿಕ್ಕಾರ ಕೂಗಿದ್ದಲ್ಲದೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪಡಿಸುವ ಮೂಲಕ ಅಪಪ್ರಚಾರ ಮಾಡಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ತಿಳಿಸಿದ್ದಾರೆ.

\
ಅವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಬಳಿಕ ಪತ್ರಕರ್ತರರೊಂದಿಗೆ ಮಾತನಾಡಿದರು. ಗುಂಡ್ಯದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಆ ಭಾಗದ ಕಿಶೋರ್ ಶಿರಾಡಿ ನೇತೃತ್ವದಲ್ಲಿ ಬಂದವರಿಂದ ಮಾಹಿತಿ ಪಡೆದ ಶಾಸಕ ಸಂಜೀವ ಮಠಂದೂರು ಅವರು ಪೊಲೀಸ್ ಅಧಿಕಾರಿಗಳಿಗೆ ಪೋನ್ ಮಾಡಿ ಆರೋಪಿಗಳಲ್ಲದವರನ್ನು ಬಂಧಿಸಬಾರದೆಂದು ಹೇಳಿದ್ದರು. ರಾತ್ರಿ ಅದೇ ಯುವಕರು ಶಾಸಕರು ಉಪ್ಪಿನಂಗಡಿಯಲ್ಲಿ ಬೆಂಗಳೂರಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ವೇಳೆ ಅಲ್ಲಿಗೆ ಬಂದು ಮಾತನಾಡಿದರು.

ಆ ಸಂದರ್ಭದಲ್ಲಿ ಪರಿವಾರ ಸಂಘಟನೆಯ ಕಾರ್ಯಕರ್ತರಾದ ಹಿಂದು ಜಾಗರಣಾ ವೇದಿಕೆ, ಬಜರಂಗದಳ, ಬಿಜೆಪಿ ಕಾರ್ಯಕರ್ತರು ನೆಲ್ಯಾಡಿ ಕಿಶೋರ್ ಶಿರಾಡಿಯವರೊಂದಿಗೆ ಬಂದಿದ್ದರು. ಶಾಸಕರು ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡುವ ಚಿಂತನೆ ಮಾಡಿದ್ದರು. ಬಳಿಕ ಶಾಸಕರು ಬಸ್‌ನಲ್ಲಿ ತೆರಳಿದ ಬಳಿಕ ಅಲ್ಲಿ ಒಂದಷ್ಟು ಹೊರಗಿನಿಂದ ಬಂದ ವಿಘ್ನ ಸಂತೋಷಿಗಳು ಶಾಸಕರಿಗೆ ಧಿಕ್ಕಾರ ಕೂಗಿದ್ದಾರೆ. ಈ ಕುರಿತು ಕಿಶೋರ್ ಶಿರಾಡಿಯವರೇ ಸ್ಪಷ್ಟನೆ ನೀಡಿದ್ದಾರೆ. ಕಾರ್ಯಕರ್ತರಿಗೆ ತೊಂದರೆ ಆದಾಗ ಶಾಸಕರು ಮಾತನಾಡಿಸುವ ವ್ಯವಸ್ಥೆ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಶಾಸಕರ ವಿರುದ್ಧ ಅಪಪ್ರಚಾರ ಮಾಡಬಾರದು ಎಂದು ಅವರು ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಂತಿವನ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ, ಹರಿಪ್ರಸಾದ್, ಹರೀಶ್ ಬಿಜತ್ರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here