ಪುತ್ತೂರು: ಶಾರ್ಟ್ ಸರ್ಕ್ಯೂಟ್ ನಿಂದ ರೆಫ್ರಿಜರೇಶನ್, ಏರ್ ಕಂಡಿಷನ್ ರಿಪೇರಿ ಅಂಗಡಿಯೊಂದು ಬೆಂಕಿ ತಗುಲಿದ ಘಟನೆ ಏ.7ರಂದು ಸುಶ್ರುತ ಆಸ್ಪತ್ರೆ ಬಳಿಯ ಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಬೆಳಿಗ್ಗೆ ಈ ಘಟನೆ ನಡೆದಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮಳಿಗೆಯಲ್ಲಿದ್ದ ಎಲ್ಲಾ ಫ್ರಿಜ್, ಏರ್ ಕಂಡಿಷನ್ ಹಾಗೂ ಇತರೆ ಬಿಡಿಭಾಗಗಳು ಸಂಪೂರ್ಣ ಬೆಂಕಿಗೆ ಆಹುತಿಗಾಗಿದೆ. ಅಂದಾಜು 15 ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ ಎಂದು ಮಾಲಕ ವಿವೇಕ್ರವರು ತಿಳಿಸಿದ್ದಾರೆ.