ಕಾಣಿಯೂರು: ಕಾಣಿಯೂರು ಗ್ರಾ.ಪಂ.ವ್ಯಾಪ್ತಿಯ ಚಾರ್ವಾಕ ಗ್ರಾಮದ ಮುದುವ ಎಂಬಲ್ಲಿ 33ಕೆವಿ ವಿದ್ಯುತ್ ಸಬ್ಸ್ಟೇಷನ್ ಅನುಷ್ಠಾನಕ್ಕೆ ಉದ್ದೇಶಿಸಿರುವ ಜಾಗದಲ್ಲಿ ಮೆಸ್ಕಾಂ ಇಲಾಖಾಧಿಕಾರಿಗಳು ಮಣ್ಣು ಪರೀಕ್ಷೆ ಫೆ 1ರಂದು ನಡೆಸಿದ್ದಾರೆ.
ಈಗಾಗಲೇ ಚಾರ್ವಾಕ ಮುದುವದಲ್ಲಿ 33 ಕೆವಿ ಸಬ್ಸ್ಟೇಷನ್ ನಿರ್ಮಾಣಕ್ಕೆ 70ಸೆಂಟ್ಸ್ ಜಾಗವನ್ನು ಮೀಸಲಿಡಲಾಗಿದ್ದು, ಜಾಗವನ್ನು ಸಮತಟ್ಟುಗೊಳಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಮಣ್ಣು ಪರೀಕ್ಷೆ ಈ ಸಂದರ್ಭದಲ್ಲಿ ಕುಂಬ್ರ ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯನಿರ್ವಹಕ ಇಂಜಿನೀಯರ್ ವಸಂತ್, ಸವಣೂರು ಮೆಸ್ಕಾಂ ಶಾಖೆಯ ಕಿರಿಯ ಇಂಜೀನಿಯರ್ ನಾಗರಾಜ್, ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ಉದನಡ್ಕ, ಸದಸ್ಯ ತಾರಾನಾಥ ಇಡ್ಯಡ್ಕ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಜತ್ತಪ್ಪ ಗೌಡ ಉದ್ಲಡ್ಡ, ಸವಣೂರು ಮೆಸ್ಕಾಂ ಉಮೇಶ್ ಕೆರೆನಾರು, ಮುಖ್ತಾರ್ ಉಪಸ್ಥಿತರಿದ್ದರು.