ಪುತ್ತೂರು: ಡಾ. ವಿಧುಷಿ ಪವಿತ್ರಾ ರೂಪೇಶ್ ಅವರಿಗೆ, ಸ್ವರ ತರಂಗ ಸೇವಾ ಟ್ರಸ್ಟ್ ಬೆಂಗಳೂರು, ಡಾ. ಎಸ್.ಪಿ ಆಚಾರ್ಯ ರವರ ಸಾರಥ್ಯದಲ್ಲಿ ರಾಜ್ಯ ಮಟ್ಟದ “ನಡೆದಾಡುವ ದೇವರು, ಗಾಯಕಯೋಗಿ, ಕರ್ನಾಟಕ ರತ್ನ, ಪದ್ಮಭೂಷಣ, ತ್ರಿವಿದ ದಾಸೊಹಿ ಡಾ. ಶ್ರೀ ಶಿವಕುಮಾರ ಸ್ವಾಮಿ ವಿಶ್ವರತ್ನ ಪ್ರಶಸ್ತಿ” ಯನ್ನು ನೀಡಲಾಯಿತು.
ಪುತ್ತೂರಿನ ಪ್ರಸಿದ್ಧ ಎಲೆಕ್ಟ್ರಾನಿಕ್ ಮಳಿಗೆಯಾದ ಶೇಟ್ ಎಲೆಕ್ಟ್ರಾನಿಕ್ಸ್‌ನ ಮಾಲಕ ರೂಪೇಶ್ ಶೇಟ್ ರವರ ಪತ್ನಿ ಪವಿತ್ರ ರೂಪೇಶ್ ಶೇಟ್ ರವರಿಗೆ ಅ.12ರಂದು ಸ್ವರ ತರಂಗ ಚಾರಿಟೇಬಲ್ ಟ್ರಸ್ಟ್ ನ 50ನೇ ಅದ್ದೂರಿ ಸಂಚಿಕೆ ಪ್ರಯುಕ್ತ ಬೆಂಗಳೂರಿನ ಶ್ರೀ ಸಾಯಿ ಸ್ಪೋರ್ಟ್ಸ್ ಕ್ಲಬ್ ಬಾಲಗಂಗಾಧರ ನಗರದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ನಟರಾದ ರಾಮಕೃಷ್ಣ, ಡೊಂಬರ ಕೃಷ್ಣ, ಶಿವಕುಮಾರ್ ಆರಾಧ್ಯ, ಎಸ್ಕಾರ್ಟ್ ಶ್ರೀನಿವಾಸ್, ಚಲನಚಿತ್ರ ನಿರ್ದೇಶಕಿ ಗೌರಿ, ಸಮಾಜ ಸೇವಕ ಡಾ. ಪ್ರಶಾಂತ್ ಚಕ್ರವರ್ತಿ, ಕರ್ನಾಟಕ ಜನಸೇನಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.