ಪುತ್ತೂರು: ಮುಈನುಲ್ ಇಸ್ಲಾಂ ಜಮಾಅತ್ ಕಮಿಟಿ, ಶಂಸುಲ್ ಉಲಮಾ ಯೂತ್ ವಿಂಗ್ ಪಾಳ್ಯತ್ತಡ್ಕ ಈಶ್ವರಮಂಗಲ ಇದರ ಆಶ್ರಯದಲ್ಲಿ ಶಂಸುಲ್ ಉಲಮಾ ಅನುಸ್ಮರಣಾ ಮಹಾ ಸಮ್ಮೇಳನ, ಮೌಲಿದ್ ಮಜ್ಲಿಸ್ ಹಾಗೂ ಧಾರ್ಮಿಕ ಮತ ಪ್ರವಚನ ಕಾರ್ಯಕ್ರಮ ಫೆ.13ರಿಂದ ಫೆ.15ರ ವರೆಗೆ ಪ್ರತಿದಿನ ರಾತ್ರಿ ಗಂಟೆ 7-30ಕ್ಕೆ ಸರಿಯಾಗಿ ನಡೆಯಲಿದೆ.
ಫೆ.13ರಂದು ಸಂಜೆ ಧ್ವಜಾರೋಹಣವನ್ನು ಪಾಳ್ಯತ್ತಡ್ಕ ಜಮಾಅತ್ ಕಮಿಟಿ ಅಧ್ಯಕ್ಷ ಎನ್.ಎಸ್ ಅಬ್ದುಲ್ಲ ಹಾಜಿ ನೆರವೇರಿಸಲಿದ್ದಾರೆ. ರಾತ್ರಿ ಗಂಟೆ 7-30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಸಯ್ಯದ್ ಕೆ.ಎಸ್ ಅಲೀ ತಂಙಳ್ ಕುಂಬೋಳ್ ಅವರು ದುವಾ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.
ಪಾಳ್ಯತ್ತಡ್ಕ ಜಮಾಅತ್ ಕಮಿಟಿ ಅಧ್ಯಕ್ಷ ಎನ್.ಎಸ್ ಅಬ್ದುಲ್ಲ ಹಾಜಿ ಅಧ್ಯಕ್ಷತೆ ವಹಿಸಲಿದ್ದು ಅಬ್ದುಲ್ ಅಝೀಝ್ ಅಶ್ರಫಿ ಪಾಣತ್ತೂರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫೆ.14ರಂದು ದುವಾ ಮತ್ತು ಉದ್ಘಾಟನೆಯನ್ನು ಸಯ್ಯದ್ ಎನ್‌ಪಿಎಂ ಫಳುಲ್ ಹಾಮಿದ್ ಕೋಯಮ್ಮ ತಂಙಳ್ ಕುನ್ನುಂಗೈ ನೆರವೇರಿಸಲಿದ್ದು ಪಾಳ್ಯತ್ತಡ್ಕ ಶಂಸುಲ್ ಉಲಮಾ ಯೂತ್ ವಿಂಗ್‌ನ ಅಧ್ಯಕ್ಷ ಕೆ.ಎಚ್ ಮಹಮ್ಮದ್ ಅಧ್ಯಕ್ಷತೆ ವಹಿಸಲಿದ್ದಾರೆ. ಯು.ಕೆ ಹನೀಫ್ ನಿಝಾಮಿ ಮೊಗ್ರಾಲ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫೆ.15ರಂದು ಮಗ್ರಿಬ್ ನಮಾಜಿನ ಬಳಿಕ ಸಯ್ಯದ್ ಬುರ್ಹಾನ್ ಅಲೀ ತಂಙಳ್ ಅಲ್ ಬುಖಾರಿ ನೇತೃತ್ವದಲ್ಲಿ ಶಂಸುಲ್ ಉಲಮಾ ಮೌಲೀದ್ ಮಜ್ಲಿಸ್ ನಡೆಯಲಿದೆ.
ರಾತ್ರಿ ಗಂಟೆ 7-30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯಿದುಲ್ ಉಲಮಾ ಅಸ್ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್‌ರವರು ದುವಾ ಮತ್ತು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಸ್ವಾಗತ ಸಮಿತಿ ಚೇರ್‌ಮೆನ್ ಅಬ್ದುಲ್ ಖಾದರ್ ಹಾಜಿ ಹಿರಾ ಅಧ್ಯಕ್ಷತೆ ವಹಿಸಲಿದ್ದು ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿ, ಉಸ್ಮಾನುಲ್ ಫೈಝಿ, ಪಾಳ್ಯತ್ತಡ್ಕ ಖತೀಬ್ ನಝೀರ್ ಅಝ್‌ಹರಿ ಬೊಳ್ಮಿನಾರ್ ನೂರುಲ್ ಹುದಾ ಪ್ರಾಂಶುಪಾಲ ಅಡ್ವೊಕೇಟ್ ಹನೀಫ್ ಹುದವಿ ದೇಲಂಪಾಡಿ, ಕುಂಬ್ರ ಕೆಐಸಿಯ ಪ್ರೊ: ಅನೀಸ್ ಕೌಸರಿ, ಜಂಇಯ್ಯತುಲ್ ಮುಅಲ್ಲಿಮೀನ್ ದ.ಕ ಜಿಲ್ಲಾಧ್ಯಕ್ಷ ಶಂಸುದ್ದೀನ್ ದಾರಿಮಿ ಪಡುಮಲೆ ಮೊದಲಾದವರು ಆಶಂಸ ಭಾಷಣ ನಡೆಸಲಿದ್ದಾರೆ. ಅಡ್ವೊಕೇಟ್ ಓಣಂಪಿಳ್ಳಿ ಮುಹಮ್ಮದ್ ಫೈಝಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.