ಸುಳ್ಯಪದವಿನಲ್ಲಿ ಅಝ್ಮೀಯ ಎಂಟರ್ ಪ್ರೈಸಸ್ ಶುಭಾರಂಭ

0

ಪುತ್ತೂರು: ಅಡಿಕೆ, ರಬ್ಬರ್, ಮತ್ತು ಇನ್ನಿತರ ಕಾಡುತ್ಪತ್ತಿಗಳ ಖರೀದಿ ಕೇಂದ್ರ ಅಝ್ಮೀಯ ಎಂಟರ್ ಪ್ರೈಸಸ್ ಅ.13ರಂದು ಸುಳ್ಯಪದವು ಬೀರಮೂಲೆ ಆರ್ಕೇಡ್‌ನಲ್ಲಿ ಶುಭಾರಂಭಗೊಂಡಿತು.


ಅಸ್ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು ಅವರು ಉದ್ಘಾಟಿಸಿ ಪ್ರಾರ್ಥನೆ ನೆರವೇರಿಸಿದರು. ಪ್ರಭಾಕರ ಭಟ್ ಮಾಸ್ಟರ್ ಪ್ಲಾನರಿ ಹಾಗೂ ದಾಮೋದರ ಕುಳ ಅವರು ಪ್ರಥಮ ಗ್ರಾಹಕರಾಗಿ ಅಡಿಕೆ ನೀಡುವ ಮೂಲಕ ವ್ಯವಹಾರಕ್ಕೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಬೀರಮೂಲೆ ಆರ್ಕೇಡ್‌ನ ಮಾಲಕ ಶ್ರೀಕೃಷ್ಣ ಭಟ್, ಎಸ್.ಎಂ.ಎ ದ.ಕ ಸೌತ್ ಜಿಲ್ಲಾಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಫಾರೂಕ್ ಇಂಜಿನಿಯರ್ ಬೆಂಗಳೂರು, ಶೀಶ ಭಟ್, ಹರ್ಷ ಭಟ್, ಮಜೀದ್ ಮಿಸ್ಮಾ ಬಾಳಾಯ, ಸದಾನಂದ ಪೋಸ್ಟ್‌ಮೆನ್, ಜನಾರ್ದನ ಪಿಲಿಪುಡೆ, ಅಪ್ಪಣ್ಣ ನಾಯಕ್, ಮುತ್ತಣ್ಣ ರೈ ಚೆಲ್ಯಡ್ಕ, ಪ್ರಸಾದ್ ರೈ ಚೆಲ್ಯಡ್ಕ, ಗಿರಿಧರ್, ಅಚ್ಯುತ್ತ ಭಟ್, ಶಾಕಿರ್ ಹಾಜಿ ಮಿತ್ತೂರು, ಅಝೀಝ್ ರೆಂಜ, ಸಲಾಂ ಪದಡ್ಕ, ಕಬೀರ್ ಎಂ.ಎಂ, ಕೆ.ಪಿ ಮುಸ್ತಫಾ, ಯೂಸುಫ್ ಪಿಟಿಪಿ, ಅಝೀಝ್ ನೀರ್ಪಾಡಿ, ನಾಸಿರ್ ಯು.ಕೆ, ರಾಘವ ಮೇಸ್ತ್ರಿ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.

ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿದ ಅಝ್ಮೀಯ ಎಂಟರ್ ಪ್ರೈಸಸ್‌ನ ಮಾಲಕರಾದ ಯೂಸುಫ್ ಹಾಜಿ ಕೈಕಾರ ಹಾಗೂ ಹಾಫಿಝ್ ಕೈಕಾರ ಮಾತನಾಡಿ ನಮ್ಮಲ್ಲಿ ಅಡಿಕೆ, ರಬ್ಬರ್, ಮತ್ತು ಇನ್ನಿತರ ಎಲ್ಲಾ ಬಗೆಯ ಕಾಡುತ್ಪತ್ತಿಗಳನ್ನು ಖರೀದಿಸಲಾಗುವುದು, ಹೆಚ್ಚಿನ ಮಾಹಿತಿಗಾಗಿ ಮೊ: 9036379186, 7619657089 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here