ಪುತ್ತೂರು: ಎಸ್ವೈಎಸ್ ರೆಂಜಲಾಡಿ-ಕೂಡುರಸ್ತೆ ಇದರ ವಾರ್ಷಿಕ ಮಹಾಸಭೆ ಎಸ್ವೈಎಸ್ ಅಧ್ಯಕ್ಷರಾದ ಅಬ್ಬಾಸ್ ಮುಸ್ಲಿಯಾರ್ ಕಟ್ಟತ್ತಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು.
2022-23ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಪ್ರಧಾನ ಕಾರ್ಯದರ್ಶಿ ಬಶೀರ್ ಪರಾಡ್ ವಾಚಿಸಿದರು. ನಂತರ ಎಸ್ವೈಎಸ್ ಕುಂಬ್ರ ಸೆಂಟರ್ ಕೋಶಾಧಿಕಾರಿ ಮುಹಮ್ಮದ್ ಕೆಜಿಎನ್ರವರ ನೇತೃತ್ವದಲ್ಲಿ 2023-24ನೇ ಸಾಲಿನ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಕೂಡುರಸ್ತೆ, ಪ್ರಧಾನ ಕಾರ್ಯದರ್ಶಿಯಾಗಿ ಶಮೀರ್ ಸಖಾಫಿ ಅಲ್ ಹಿಕಮಿ ಬೈತ್ತಡ್ಕ, ಕೋಶಾಧಿಕಾರಿಯಾಗಿ ರಝಾಕ್ ಪರಾಡ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಝಾಕ್ ಸಖಾಫಿ ನೇರೊಳ್ತಡ್ಕ, ಜೊತೆ ಕಾರ್ಯದರ್ಶಿಯಾಗಿ ಖಲಂದರ್ ಶಾಫಿ ಕಲ್ಪನೆ, ದಹ್’ವಾ ಕಾರ್ಯದರ್ಶಿಯಾಗಿ ರಝಾಕ್ ಮುಸ್ಲಿಯಾರ್ ಬಾಳಾಯ, ಸಾಂತ್ವನ ಕಾರ್ಯದರ್ಶಿಯಾಗಿ ಹನೀಫ್ ಕೂಡುರಸ್ತೆ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನೀಫ್ ಕಲ್ಪನೆ, ಹಂಝ ಕೂಡುರಸ್ತೆ, ಬಶೀರ್ ಪರಾಡ್, ಅಬ್ದುಲ್ ಕರೀಂ ಅಜ್ಜಿಕ್ಕಲ್ರವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಮುಖರಾದ ಇಬ್ರಾಹಿಂ ಮುಸ್ಲಿಯಾರ್ ಕೂಡುರಸ್ತೆ, ಇಸ್ಮಾಯಿಲ್ ಕಟ್ಟತ್ತಡ್ಕ, ಅಬ್ದುಲ್ ಖಾದರ್ ಕೂಡುರಸ್ತೆ, ಎಸ್ಸೆಸ್ಸೆಫ್ ಕೋಶಾಧಿಕಾರಿ ಸಿದ್ದೀಕ್ ಕಲ್ಪನೆ ಮುಂತಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬಶೀರ್ ಪರಾಡ್ ಸ್ವಾಗತಿಸಿ ವಂದಿಸಿದರು.