ರಾಜ್ಯಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್:ಪೆರಾಬೆ ಗ್ರಾ.ಪಂ ಕಾರ್ಯದರ್ಶಿ ಉಸ್ಮಾನ್ ದ್ವಿತೀಯ

0

ಪುತ್ತೂರು: ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಕೋಲಾರದ ಪೊಲೀಸ್ ಪೆರೇಡ್ ಮೈದಾನದಲ್ಲಿ ಫೆ.11 ಮತ್ತು 12ರಂದು ನಡೆದ ರಾಜ್ಯಮಟ್ಟದ 41ನೇ ಸಾಲಿನ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನ ಪುರುಷರ ವಿಭಾಗದ 200 ಮೀಟರ್ ಓಟದ ಸ್ಪರ್ಧೆ ಮತ್ತು 100 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಪೆರಾಬೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಉಸ್ಮಾನ್ ಬಿ. ಅವರು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಮೂಲತಃ 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶನಗರ ನಿವಾಸಿಯಾಗಿದ್ದು ಪ್ರಸ್ತುತ ಪೆರ್ನೆ ಮೈರಕಟ್ಟೆಯಲ್ಲಿ ವಾಸ ಇರುವ ಇವರು ದ.ಕ.ಜಿ.ಪಂ.ಕಛೇರಿಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯದಲ್ಲಿದ್ದಾರೆ.

ಉಸ್ಮಾನ್ ಅವರು ಸಿತಾರ ಆದರ್ಶನಗರ ಮತ್ತು ಪ್ರಿಯಾ ಉಬಾರ್ ಕ್ರಿಕೆಟ್ ತಂಡದ ಆಲ್ರೌಂಡರ್ ಆಟಗಾರರಾಗಿಯೂ ಗುರುತಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here