ಪುತ್ತೂರು: ಬಿಜೆಪಿ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆಯ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಶಾಫಿ ಬೆಳ್ಳಾರೆಯವರು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಎಸ್‌ಡಿಪಿಐ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದು ಎಸ್.ಡಿ.ಪಿ.ಐ ಮತ್ತು ಪಿ.ಎಫ್ .ಐ ಒಂದೇ ನಾಣ್ಯದ ಎರಡು ಮುಖಗಳೆಂದು ಸಾಭೀತಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಅವರು ಸುದ್ದಿಗೆ ತಿಳಿಸಿದ್ದಾರೆ. ಈ ಕುರಿತು ಅವರು ಚುನಾವಣಾ ಆಯೋಗ ಈ ವ್ಯಕ್ತಿಯ ಉಮೇದುವಾರಿಕೆಯನ್ನೂ ಪರಿಗಣಿಸಬಾರದೆಂದು ಟ್ವೀಟ್ ಮಾಡಿದ್ದಾರೆ.
ಪುತ್ತೂರು ವಿಧಾನಸಭಾ ಕ್ಷೇತ್ರದ ಎಸ್ ಡಿ ಪಿ ಐ ಅಭ್ಯರ್ಥಿಯಾಗಿ ಶಾಫಿ ಬೆಳ್ಳಾರೆ ಯನ್ನು ಕಣಕ್ಕಿಳಿಸಿರುವುದು ಅ ಪಾರ್ಟಿ ತಾನೊಂದು ರಾಜಕೀಯ ಪಾರ್ಟಿ ಎಂದು ಹೇಳಿಕೊಳ್ಳುತ್ತಿದ್ದ ಮುಖವಾಡ ಕಳಚಿ ಬಿದ್ದಿದೆ. ನಮ್ಮ ಪಕ್ಷದ ದಿವಂಗತ ಪ್ರವೀಣ್ ನಟ್ಟಾರು ಕಾರ್ಯಕರ್ತನ ಹತ್ಯೆಯ ಸಂಚು ರೂಪಿಸುವ ಮೂಲಕ ಮತ್ತು ರಾಜ್ಯದ್ಯಂತ ಗಲಭೆ ಎಬ್ಬಿಸುವುದರ ಮುಖಾಂತರ ಮತಾಂಧತೆಯನ್ನೆ ಮೈಗೂಡಿಸಿಕೊಂಡಿರುವ ವ್ಯಕ್ತಿಯನ್ನು ಎನ್ ಐ ಎ ಸೂಕ್ತ ಸಾಕ್ಷಿ ಆಧಾರಗಳನ್ನಿಟ್ಟುಕೊಂಡೇ ಬಂಧಿಸಿದೆ. ಹೀಗಿರುವಾಗ ಚುನಾವಣಾ ಆಯೋಗ ಈ ವ್ಯಕ್ತಿಯ ಉಮೇದುವಾರಿಕೆಯನ್ನೂ ಪರಿಗಣಿಸಬಾರದೆಂದು ವಿನಂತಿಯನ್ನು ಮಾಡುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಎಸ್.ಡಿ.ಪಿ.ಐ ಮತ್ತು ಪಿ.ಎಫ್ .ಐ ಒಂದೇ ನಾಣ್ಯದ ಎರಡು ಮುಖಗಳೆಂದು ಸಾಭೀತಾಗಿದೆ ಎಂದು ಶಾಸಕರು ಸುದ್ದಿಗೆ ತಿಳಿಸಿದ್ದಾರೆ.