ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾಮಾಜಿಕ ಅರಣ್ಯ ಇಲಾಖೆ ಪುತ್ತೂರು, ತಾಲೂಕು ಪಂಚಾಯತ್ ಹಾಗೂ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಸಹಯೋಗದಲ್ಲಿ ಸುರುಳಿಮೂಲೆ ಎಂಬಲ್ಲಿ ಸಾಮಾಜಿಕ ಅರಣ್ಯ ಇಲಾಖೆ, ನರೇಗಾ ಹಾಗೂ ಗ್ರಾ.ಪಂ. ಅನುದಾನಗಳ ಒಗ್ಗೂಡಿಸುವಿಕೆಯಲ್ಲಿ ನಿರ್ಮಾಣಗೊಳ್ಳಲಿರುವ ಪವಿತ್ರ ವನ ಹಾಗೂ ಗ್ರಾಮೀಣ ಉದ್ಯಾನವನಕ್ಕೆ ಫೆ.16ರಂದು ಶಂಕು ಸ್ಥಾಪನೆ ನೆರವೇರಿಸಲಾಯಿತು.
ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಅಧ್ಯಕ್ಷ ರಮೇಶ್ ರೈ ಸಾಂತ್ಯ ದೀಪ ಪ್ರಜ್ವಲಿಸಿ ಶಂಕು ಸ್ಥಾಪನೆ ನೆರೆವೇರಿಸಿದರು.
ಪುತ್ತೂರು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ (ಗ್ರಾ.ಉ.) ಶೈಲಜಾ ಭಟ್, ಪುತ್ತೂರು ಸಾಮಾಜಿಕ ವಲಯ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ, ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂದೇಶ್ ಕೆ.ಎನ್., ನೆಟ್ಟಣಿಗೆ ಮುಡ್ನೂರು ಗ್ರಾ.ಪಂ. ಸದಸ್ಯರಾದ ರಾಮ ಮೇನಾಲ, ವೆಂಕಪ್ಪ ನಾಯ್ಕ, ಲಲಿತಾ ಸುಧಾಕರ ಮೇನಾಲ, ಪ್ರಪುಲ್ಲಾ ರೈ, ನರೇಗಾ ತಾಂತ್ರಿಕ ಸಂಯೋಜಕ ವಿನೋದ್ ಕುಮಾರ್, ಅರಣ್ಯ ಇಲಾಖಾ ತಾಂತ್ರಿಕ ಸಹಾಯಕರಾದ ವರ್ಷಾ ಕಯ್ಯ, ಐಇಸಿ ಸಂಯೋಜಕ ಭರತ್ ರಾಜ್ ಕೆ., ಗ್ರಾ.ಪಂ. ಕಾರ್ಯದರ್ಶಿ ಶಾರದ, ಸಿಬ್ಬಂದಿಗಳಾದ ಶೀನಪ್ಪ ಮೇನಾಲ, ಚಂದ್ರಶೇಖರ ಕನ್ನಟಿಮಾರ್, ರಾಜ್ ಕಿರಣ್ ಬಿ. ಉಪಸ್ಥಿತರಿದ್ದರು.