ಮೈತ್ರಿ ಇಲೆಕ್ಟ್ರಿಕ್ ಕಂ.ಸಹಯೋಗದಲ್ಲಿ ಗ್ರೇಟ್ ವೈಟ್ ಇಲೆಕ್ಟ್ರಿಕ್ ಇಂಜಿನಿಯರ್‍ಸ್ ಮೀಟ್

0

ಪುತ್ತೂರು: ಮೈತ್ರಿ ಇಲೆಕ್ಟ್ರಿಕ್ ಕಂ.ಸಹಯೋಗದಲ್ಲಿ ಕೋರ್ಟುರಸ್ತೆಯ ಇಂಡಿಯನ್ ಆರ್ಕೆಡ್‌ನಲ್ಲಿರುವ ಎಸಿ ಮುಳಿಯ ಟ್ರೈನಿಂಗ್ ಹಾಲ್‌ನಲ್ಲಿ ಫೆ.15ರಂದು ಫೇಸ್ ಪುತ್ತೂರು ಇದರ ಸದಸ್ಯರಿಗೆ ಗ್ರೇಟ್ ವೈಟ್ ಇಲೆಕ್ಟ್ರಿಕಲ್ ಉತ್ಪನ್ನಗಳ ಪರಿಚಯ ಮತ್ತು ಮಾಹಿತಿ ಕಾರ್ಯಾಗಾರ ನಡೆಯಿತು.

ಗ್ರೇಟ್ ವೈಟ್ ಕಂಪೆನಿಯ ಜನರಲ್ ಮೆನೇಜರ್ ಗಿರೀಶ್ ಪಿಳ್ಳೈ, ಸಿಎಂಡ್‌ಎಫ್ ರಿಷಭ್ ಶಾ, ಏರಿಯಾ ಸೇಲ್ಸ್ ಮೆನೇಜರ್ ರಾಜೇಶ್, ಟೆರಿಟರಿ ಸೇಲ್ಸ್ ಮೇನೇಜರ್ ಶರತ್, ದಿನೇಶ್, ರವಿರವರು ಮಾಹಿತಿ ನೀಡಿದರು.

ಪೇಸ್ ಪುತ್ತೂರು ಅಧ್ಯಕ್ಷ ಮಾಸ್ಟರ್ ಪ್ಲಾನರಿಯ ಅಕ್ಷಯ ಕುಮಾರ್ ಮತ್ತು ಗ್ರೇಟ್ ವೈಟ್ ಇಲೆಕ್ಟ್ರಿಕ್ ಉತ್ಪನ್ನಗಳ ಸ್ಥಳೀಯ ಡೀಲರ್, ಮೈತ್ರಿ ಇಲೆಕ್ಟ್ರಿಕ್ ಕಂ.ಮಾಲಕ ರವಿನಾರಾಯಣ ಎಂ. ಮಾತನಾಡಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಮೈತ್ರಿ ಇಲೆಕ್ಟ್ರಿಕ್ ಕಂಪೆನಿಯ ಮೆನೇಜರ್ ಉರುಬನ್ ಡಿಸೋಜ ವಂದಿಸಿದರು.

LEAVE A REPLY

Please enter your comment!
Please enter your name here